ವಿಶ್ವಪ್ರಸಿದ್ಧ ಉಡುಪಿ ಕ್ಷೇತ್ರಕ್ಕೆ ಇಂತಹ ಶಾಸಕ ಬೇಕೇ..?- ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ: ಉಡುಪಿ ಕ್ಷೇತ್ರವು ಪ್ರಪಂಚದಾದ್ಯಂತ ವಿದ್ಯಾಲಯಗಳಿಗೆ ದೈವ ದೇವಸ್ಥಾನಗಳಿಗೆ ಹೆಸರುವಾಸಿಯಾಗಿದ್ದು ,ಇಂತಹ ಪುಣ್ಯಕ್ಷೇತ್ರದ ಹೆಸರನ್ನು ತಮ್ಮ ಅವಿವೇಕದ ಹೇಳಿಕೆಗಳಿಂದ ಮತ್ತು ಗೂಂಡ ಪ್ರವೃತ್ತಿಯಿಂದ ನಮ್ಮ ಉಡುಪಿಯ ಶಾಸಕ ಯಶ್ಪಾಲ್ ಸುವರ್ಣ ಅವರು ಹರಾಜು ಹಾಕಿದ್ದಾರೆ.
ಇಂತಹ ಒಂದು ಶಾಸಕರ ಅಗತ್ಯ ನಮ್ಮ ಉಡುಪಿಯ ಜನತೆಗೆ ಇದೆಯಾ ಎಂಬ ಪ್ರಶ್ನೆ ಎದುರಾಗಿದೆ. ನಮ್ಮ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಕೇಂದ್ರ ಸರಕಾರದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಹಾಗೂ ಅವರ ಕುಟುಂಬವನ್ನು ಬಾಬರಿ ಮಸೀದಿ ನಾಶ ಮಾಡಿದ ರೀತಿಯಲ್ಲಿ ಮಾಡುತ್ತೇವೆ ಎಂದು ಹೇಳಿದ ಈ ಅವಿವೇಕದ ಮಾತು ಅವರ ಗೂಂಡ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತಿದೆ.
ರಾಹುಲ್ ಗಾಂಧಿಯವರ ಕುಟುಂಬ ನಮ್ಮ ದೇಶಕ್ಕಾಗಿ ದೇಶದ ಬಡ ಜನರಿಗಾಗಿ ದೇಶದ ವಿದ್ಯಾರ್ಥಿಗಳಿಗಾಗಿ ತಮ್ಮ ಪ್ರಾಣವನ್ನೇ ಬಲಿದಾನವನ್ನು ನೀಡಿದ ಇಂತಹ ಕುಟುಂಬವನ್ನು ನಾಶ ಗೊಳಿಸುತ್ತೇನೆ ಎಂದು ಹೇಳುವ ಇಂತಹ ಶಾಸಕನ ಅಗತ್ಯ ನಮಗೆ ಇದೆಯಾ.
ನಮ್ಮ ದೇಶದ ವಿದ್ಯಾರ್ಥಿಗಳು ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟಿಸಿದರೆ ಅವರನ್ನು ಭಯೋತ್ಪಾದಕರನ್ನು ಶಿಕ್ಷಿಸುವಂತೆ ನಮ್ಮ ದೇಶದ ಮಕ್ಕಳಿಗೆ ಲಾಠಿಚಾರ್ಜ್ ಮಾಡಿ ಅವರಿಗೆ ಚಿತ್ರಹಿಂಸೆ ನೀಡಿದಂತಹ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ನಮ್ಮ ನಾಯಕ ರಾಹುಲ್ ಗಾಂಧಿಯವರು ಅವರಿಗೆ ಬೆಂಬಲವಾಗಿ ನಿಂತದ್ದು ತಪ್ಪೇ. ನಮ್ಮ ದೇಶದ ವಿದ್ಯಾರ್ಥಿಗಳನ್ನು ಭಯೋತ್ಪಾದಕರ ರೀತಿಯಲ್ಲಿ ಅವರ ವಿರುದ್ಧ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ನಾಯಕರುಗಳು ವಿದ್ಯಾರ್ಥಿಗಳ ಪ್ರತಿಭಟನೆಯಿಂದ. ಕಂಗೆಟ್ಟು ಮಾನಸಿಕ ಅಸ್ವಸ್ಥರಂತೆ ಮಾತನಾಡಿರುತ್ತಾರೆ. ಉಡುಪಿ ಜಿಲ್ಲೆಯ ಬಿಜೆಪಿ ನಾಯಕರೇ ಹಾಗೂ ಶಾಸಕರುಗಳೇ ನೀವು ಗೆಲುವು ಸಾಧಿಸಿದ್ದು ಕೇವಲ ಹಿಂದುತ್ವದ ಹೆಸರಲ್ಲಿ ಮತ್ತು ವೋಟ್ ಚೋರಿ ಮಾಡಿ ಎಂಬುದು ನೆನಪಿರಲಿ ಎಂದು ಉಡುಪಿ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷ ಸುರೇಶ್ ಶೆಟ್ಟಿ ಬನ್ನಂಜೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.





