ಶಾಸಕ ಯಶ್‌ಪಾಲ್ ವಿರುದ್ಧದ ಎಫ್‌ಐಆರ್‌ ಖಂಡಿಸಿದ ಹಿಂದೂ ಯುವಸೇನೆ: “ಗಾಂಧಿ ಕುಟುಂಬದ ಓಲೈಕೆ” ಎಂದ ಅಜಿತ್ ಕೊಡವೂರು

ಉಡುಪಿ: ಪ್ರತಿಭಟನೆಯ ವೇಳೆ ದ್ವೇಷ ಭಾಷಣ ಆರೋಪದಡಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಅನ್ನು ಉಡುಪಿ ಜಿಲ್ಲಾ ಹಿಂದೂ ಯುವಸೇನೆ ಅಧ್ಯಕ್ಷ ಅಜಿತ್ ಕುಮಾರ್ ಕೊಡವೂರು ತೀವ್ರವಾಗಿ ಖಂಡಿಸಿದ್ದಾರೆ. 

ಶಾಸಕರ ಮೇಲಿನ ಈ ಕ್ರಮ ರಾಜಕೀಯ ಪ್ರೇರಿತ ಎಂದು ಆರೋಪಿಸಿದ ಅವರು “ರಾಜ್ಯ ಸರ್ಕಾರ ಗಾಂಧಿ ಕುಟುಂಬದ ಓಲೈಕೆಯ ಪರಮಾವಧಿಯನ್ನು ತೋರಿಸುತ್ತಿದೆ. ಹಿಂದೂ ಪರ ಧ್ವನಿ ಎತ್ತುವ ಪ್ರತಿಯೊಬ್ಬ ಜನಪ್ರತಿನಿಧಿಯ ಮೇಲೆಯೂ ಈ ರೀತಿಯ ಕೇಸುಗಳನ್ನು ಹಾಕುವ ಮೂಲಕ ಸರ್ಕಾರ ದಮನ ನೀತಿ ಅನುಸರಿಸುತ್ತಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರ ಮೇಲಿನ ಈ ಕ್ರಮ ರಾಜಕೀಯ ಪ್ರೇರಿತ ಎಂದು ಆರೋಪಿಸಿದರು. “ರಾಜ್ಯ ಸರ್ಕಾರ ಗಾಂಧಿ ಕುಟುಂಬದ ಓಲೈಕೆಯ ಪರಮಾವಧಿಯನ್ನು ತೋರಿಸುತ್ತಿದೆ. ಹಿಂದೂ ಪರ ಧ್ವನಿ ಎತ್ತುವ ಪ್ರತಿಯೊಬ್ಬ ಜನಪ್ರತಿನಿಧಿಯ ಮೇಲೆಯೂ ಈ ರೀತಿಯ ಕೇಸುಗಳನ್ನು ಹಾಕುವ ಮೂಲಕ ಸರ್ಕಾರ ದಮನ ನೀತಿ ಅನುಸರಿಸುತ್ತಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಯಶ್‌ಪಾಲ್ ಸುವರ್ಣ ಅವರು ಜನರ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿಯೇ ಈ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಆರೋಪಿಸಿದ ಕೊಡವೂರು, ತಕ್ಷಣ ಪ್ರಕರಣ ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದರು. ಈ ಬಗ್ಗೆ ಹಿಂದೂ ಯುವಸೇನೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದರು.

Leave a Reply

Your email address will not be published. Required fields are marked *

error: Content is protected !!