ಅಂಬಲಪಾಡಿ ಜನಾರ್ದನ- ಶ್ರೀ ಮಹಾಕಾಳಿ ದೇವಸ್ಥಾನದಲ್ಲೂ ಬ್ರಹ್ಮಕಲಶೋತ್ಸವ ನಡೆಯುವಂತಾಗಲಿ…

ಉಡುಪಿ: ಉಡುಪಿಯ ಪುಣ್ಯಕ್ಷೇತ್ರಗಳಲ್ಲಿ ಒಂದಾದ, ಎಂಟು ಮಾಗಣೆಯಧಿಪತಿಯಾಗಿರುವ ಶ್ರೀಜನಾರ್ಧನ ಮತ್ತು ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯದೆ ಸುಮಾರು ಮೂವತ್ತುಕ್ಕೂ ಹೆಚ್ಚು ವರ್ಷಗಳೇ ಕಳೆದಿವೆ.

ಉಡುಪಿ ಎನ್ನುವುದು ಹಲವು ದೇಗುಲಗಳ ಬೀಡು. ಇತ್ತೀಚೆಗಿನ ದಿನಗಳಲ್ಲಿ ಇಲ್ಲಿನ ಹಲವು ಸಣ್ಣ ಮತ್ತು ದೊಡ್ಡ ಪುರಾತನ ದೇವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವಗಳು ನಡೆದು ಭಕ್ತರು ಪುನೀತರಾದರು. ದೇಗುಲಗಳೂ ಪಾವನವಾದವು.

ಸುಮಾರು 1992ನೇ ವರ್ಷದ ಸಮಯ ಅಂಬಲಪಾಡಿಯ ಶ್ರೀ ಮಹಾಕಾಳಿ ದೇವಿಯ ಗರ್ಭಗುಡಿ ಶಿಲಾಮಯವಾಗಿತ್ತು. ಆ ಬಳಿಕ ಇಲ್ಲಿಯವರೆಗೆ ಬ್ರಹ್ಮಕಲಶೋತ್ಸವ ಇಲ್ಲಿ ನಡೆದಿಲ್ಲ ಸಂಪ್ರದಾಯ ಪ್ರಕಾರ ದೇವಸ್ಥಾನ ಜೀರ್ಣೋದ್ಧಾರ ಗೊಂಡ ಬಳಿಕ ಸುಮಾರು 12 ವರ್ಷಕ್ಕೊಮ್ಮೆ ಬ್ರಹ್ಮಕಲಶೋತ್ಸವ ಸನ್ನಿಧಾನಲ್ಲಿ ನಡೆಸುವ ವಾಡಿಕೆ ನಡೆಯುತ್ತಾ ಬಂದಿದೆ. ಆದರೆ ಇಲ್ಲಿ ಇಷ್ಟರವರೆಗೆ ಬ್ರಹ್ಮಕಲಶೋತ್ಸವ ನಡೆದೇ ಇಲ್ಲ.

ಬ್ರಹ್ಮಕಲಶೋತ್ಸವ ಮಾಡುವುದರಿಂದ ದೇವರ ಮೂರ್ತಿಗೆ ಶಕ್ತಿಯನ್ನು ಮರುತುಂಬಿಸಲು, ಆರಾಧನಾ ಚೈತನ್ಯವನ್ನು ಹೆಚ್ಚಿಸಲು, ಲೋಕಕಲ್ಯಾಣಕ್ಕಾಗಿ, ದೋಷ ನಿವಾರಣೆಗಾಗಿ, ಭಕ್ತಿ ಭಾವನೆ ನಂಬಿಕೆ ಹೆಚ್ಚಿಸಲು, ಸಹಕಾರಿ ಆಗುತ್ತದೆ ಎನ್ನುವುದು ಭಕ್ತರ ನಂಬಿಕೆ

ಈ ಸನ್ನಿದಾನದಲ್ಲಿ ದಿನನಿತ್ಯದ ಪೂಜಾ ಕಾರ್ಯಕ್ರಮ ಭಕ್ತರ ಅಶೋತ್ತರ ಈಡೇರಿಸಲು ಹೋಮ ಹವನ, ದರ್ಶನ ಭಾಗ್ಯ ಅನ್ನ ಸಂತರ್ಪಣೆ ಕಾರ್ಯಕ್ರಮ ಹಾಗೂ ವಾರ್ಷಿಕ ಜಾತ್ರಾಮಹೋತ್ಸವ ಎಲ್ಲವೂ ಬಹಳ ಅಚ್ಚುಕಟ್ಟಾಗಿ ವೈದಿಕರ ಕೂಡುವಿಕೆಯಿಂದ ಧಾರ್ಮಿಕ ವಿಧಿ ವಿಧಾನಗಳಿಂದ ನಡೆಯುತ್ತಿದೆ. ಆದರೇ, ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯದಿರುವುದರ ಕಾರಣ ಏನೆಂದು ಯಾರಿಗೂ ತಿಳಿದಿಲ್ಲ.

ಶ್ರೀ ಜನಾರ್ಧನ ಮತ್ತು ಶ್ರೀಮಹಾಕಾಳಿ ದೇವರಿಗೆ ಬ್ರಹ್ಮಕಲಶೋತ್ಸವ ನಡೆಸುವಂತೆ ಇಲ್ಲಿನ ಧರ್ಮದರ್ಶಿಗಳು ಹಾಗೂ ಆಡಳಿತಮಂಡಳಿ, ಮುಜರಾಯಿ ಇಲಾಖೆ ದೇವರ ಸನ್ನಿಧಾನದಲ್ಲಿ ಊರ ಪರವೂರ ಭಕ್ತರ ಆಶಯದಂತೆ ಶಾಸ್ತ್ರೋಕ್ತವಾಗಿ, ವೈಭವಪೂರ್ವಕವಾಗಿ, ವಿಜೃಂಭಣೆಯಿಂದ ಆದಷ್ಟು ಬೇಗ ನಡೆಸುವಂತೆ ಚಿಂತನೆ ನಡೆಯಲಿ- ರಾಘವೇಂದ್ರ ಪೈ ಬನ್ನಂಜೆ

Leave a Reply

Your email address will not be published. Required fields are marked *

error: Content is protected !!