ಉಡುಪಿ ತುಳುಕೂಟ: ಜು.4 ರಂದು ‘ಮದೆರೆಂಗಿದರಂಗ್’ ಕಾರ್ಯಕ್ರಮ

ಉಡುಪಿ: ತುಳು ಬದುಕಿನ ವೈಶಿಷ್ಟ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಉಡುಪಿ ತುಳುಕೂಟದ ಪ್ರಾಯೋಜಕತ್ವದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ಮದೆರೆಂಗಿದರಂಗ್’ ಕಾರ್ಯಕ್ರಮವು ಜುಲೈ 4ರಂದು ಉಡುಪಿ ಬಡಗಬೆಟ್ಟು ಸೊಸೈಟಿಯ ಮೇಲ್ಭಾಗದಲ್ಲಿರುವ ಜಗನ್ನಾಥ ಸಭಾಭವನದಲ್ಲಿ ಮಧ್ಯಾಹ್ನ 2 ಗಂಟೆಯಿಂದ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸಾಂಪ್ರದಾಯಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ:
ಎಲೆಯಿಂದ ಪೀಂಪಿರಿ ಊದುವ ಸ್ಪರ್ಧೆ
ಹಲಸಿನ ಬೀಜದ ಸಿಪ್ಪೆ ತೆಗೆಯುವ ಸ್ಪರ್ಧೆ
ತೆಂಗಿನ ಗರಿಯಿಂದ ಆಟಿಕೆ ತಯಾರಿಸುವ ಸ್ಪರ್ಧೆ
6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ:
ಅಂಗೈಗೆ ಮದೆರೆಂಗಿ ಇಡುವ ಸ್ಪರ್ಧೆ
ತುಳುನಾಡಿನ ವಿವಿಧ ಹಣ್ಣುಗಳ ಪರಿಚಯ ಹೇಳುವ ಸ್ಪರ್ಧೆ
ತೆಂಗಿನ ಗರಿಯಿಂದ ಆಟಿಕೆ ತಯಾರಿಸುವ ಸ್ಪರ್ಧೆ
ಕಾಲೇಜು ವಿದ್ಯಾರ್ಥಿಗಳಿಗೆ
ಅಂಗೈಗೆ ಮದೆರೆಂಗಿ ಇಡುವ ಸ್ಪರ್ಧೆ
ಕೇಶಾಲಂಕಾರ ಸ್ಪರ್ಧೆ
ಮುಂಡಾಸ್ ಕಟ್ಟುವ ಸ್ಪರ್ಧೆ
ಹೂ ಕಟ್ಟುವ ಸ್ಪರ್ಧೆ
ಇದಲ್ಲದೆ, ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ತುಳು ರಸಪ್ರಶ್ನೆ ಹಾಗೂ ತುಳು ಲಿಪಿಯಲ್ಲಿ ಬರೆಯುವ ಸ್ಪರ್ಧೆ ಕೂಡ ನಡೆಯಲಿದೆ.
ಸ್ಪರ್ಧೆಯ ನಿಯಮಗಳು: ಮದೆರೆಂಗಿ ಸ್ಪರ್ಧೆಯು ಸಾಂಪ್ರದಾಯಿಕ ರೀತಿಯಲ್ಲಿ ನಡೆಯಲಿದ್ದು, ಕೋನ್ ಬಳಸಲು ಅವಕಾಶ ಇರುವುದಿಲ್ಲ. ಸ್ಪರ್ಧಿಗಳು ಮದೆರೆಂಗಿ ಸೊಪ್ಪನ್ನು ಕಡೆದು ತಂದು ಕಡ್ಡಿಯ ಸಹಾಯದಿಂದ ಅಂಗೈಗೆ ವಿನ್ಯಾಸ ಬಿಡಿಸಬೇಕು. ಹೂ ಕಟ್ಟುವ ಸ್ಪರ್ಧೆಯಲ್ಲಿ ಭಾಗವಹಿಸುವವರು ಹೂಗಳನ್ನು ತಾವೇ ತರಬೇಕು. ಸ್ಪರ್ಧಿಗಳು ಮಧ್ಯಾಹ್ನ 2 ಗಂಟೆಯೊಳಗೆ ಸ್ಥಳದಲ್ಲಿ ಹಾಜರಿರಬೇಕು.

ಹೆಚ್ಚಿನ ಮಾಹಿತಿಗಾಗಿ 9036483463 / 8217687475 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!