ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ: ಶ್ರೀಮದ್ ಭಾಗವತ ಸಪ್ತಾಹ ಪ್ರವಚನ ಆರಂಭ

ಪುತ್ತೂರು, ಜೂನ್ 22: ರಜತಪೀಠಪುರ ಪುತ್ತೂರಿನ ಆರಾಧ್ಯ ದೇವರಾದ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಸಪ್ತಗಿರಿ ಜ್ಞಾನಹಸ್ತದ ನೇತೃತ್ವದಲ್ಲಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸಹಯೋಗದೊಂದಿಗೆ ನಡೆಯುತ್ತಿರುವ ಶ್ರೀಮದ್ ಭಾಗವತ ಸಪ್ತಾಹ ಪ್ರವಚನ ಮಹೋತ್ಸವ ಭಾನುವಾರ ಭಕ್ತಿಭಾವದಿಂದ ಯಶಸ್ವಿಯಾಗಿ ಆರಂಭಗೊಂಡಿತು.

ಮೊದಲ ದಿನದ ಪ್ರವಚನ ಕಾರ್ಯಕ್ರಮದಲ್ಲಿ 350ಕ್ಕೂ ಅಧಿಕ ಭಕ್ತರು ಭಾಗವಹಿಸಿ, ಭಗವತ್ಕಥೆಯ ಅಮೃತವಾಣಿಯನ್ನು ಶ್ರದ್ಧಾಭಕ್ತಿಯಿಂದ ಆಲಿಸಿ ಆಧ್ಯಾತ್ಮಿಕ ಅನುಭವ ಪಡೆದರು.

ಖ್ಯಾತ ವಿದ್ವಾಂಸರಾದ ಶ್ರೀಶ ಭಟ್ ಮುದರಂಗಡಿ ಶ್ರೀಮದ್ ಭಾಗವತ ಮಹಾಪುರಾಣದ ಮಹತ್ವವನ್ನು ಮನೋಜ್ಞವಾಗಿ ನಿರೂಪಿಸಿದರು.

ಇಂದು ಸಂಜೆ 5.00 ರಿಂದ 7.30ರವರೆಗೆ ಸಪ್ತಾಹದ ಎರಡನೇ ದಿನದ ಪ್ರವಚನ ನಡೆಯಲಿದ್ದು, ಭಕ್ತಾದಿಗಳು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಲಕ್ಷ್ಮೀ ವೆಂಕಟೇಶ ದೇವರ ಕೃಪೆ ಹಾಗೂ ಆಶೀರ್ವಾದಕ್ಕೆ ಪಾತ್ರರಾಗುವಂತೆ ಸಪ್ತಗಿರಿ ಜ್ಞಾನಹಸ್ತ ಪ್ರಕಟಣೆಯಲ್ಲಿ ಮನವಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!