ಕೇಮಾರು ಸಾಂದೀಪನಿ ಸಾಧನಾಶ್ರಮಕ್ಕೆ ಸಂಸದ ಚೌಟ ಭೇಟಿ
ಮೂಡುಬಿದಿರೆ: ಮಂಗಳೂರು ಸಂಸದ ಬ್ರಿಜೇಶ್ ಚೌಟ ಭಾನುವಾರ ಕೇಮಾರಿನ ಸಾಂದೀಪನಿ ಸಾಧನಾಶ್ರಮಕ್ಕೆ ಭೇಟಿ ನೀಡಿ ಈಶ ವಿಠಲದಾಸ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.
ಆಶ್ರಮದ ಆವರಣದಲ್ಲಿ ಸ್ವಾಮೀಜಿ ಜೊತೆ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಿದ ಸಂಸದರು, ಕೇಮಾರು ಮತ್ತು ಕೊಲ್ಲೂರು ಶಾಖಾ ಮಠದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಸಹಕಾರಿ ಧುರೀಣ ದಯಾನಂದ ಪೈ, ಯುವ ಮೋರ್ಚಾದ ಅಧ್ಯಕ್ಷ ಕುಮಾರ್ ಪ್ರಸಾದ್ ಹಾಗೂ ಪ್ರಧಾನ ಕಾರ್ಯದರ್ಶಿ ಭರತ್ ಶೆಟ್ಟಿ ಉಪಸ್ಥಿತರಿದ್ದರು.
ಪಾಲಡ್ಕ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಕೇಶ್ ಶೆಟ್ಟಿ ಕೇಮಾರು, ಪುತ್ತಿಗೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಇರುವೈಲು, ಪ್ರಮುಖರಾದ ವಿಠಲ್ ಮೂಲ್ಕಿ, ಸುದರ್ಶನ್ ಆಚಾರ್ಯ ಕೇಮಾರು, ಜೀವಂಧರ್ ಶೆಟ್ಟಿಗಾರ್, ಚಂದ್ರ ಪೂಜಾರಿ, ಶಿವಪ್ರಸಾದ್ ಶೆಟ್ಟಿ. ರಂಜಿತ್ ಕೋಟ್ಯಾನ್, ಹರೀಶ್ ಪೂಜಾರಿ, ಶಾಶ್ವತ್ ಪೂಜಾರಿ ಮತ್ತಿತರರಿದ್ದರು.





