ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜ್: ಪ್ರತಿಭಾ ದಿನಾಚರಣೆ
ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜಿನ ಲಲಿತ ಕಲಾ ಸಂಘದ ವತಿಯಿಂದ ಪ್ರತಿಭಾ ದಿನಾಚರಣೆಯು ಕಾಲೇಜಿನ ಆವರಣದಲ್ಲಿ ಇಂದು ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಸೇನಾಧಿಕಾರಿ,ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕರ್ನಲ್ ನಿಟ್ಟೆ ಗುತ್ತು ಶರತ್ ಭಂಡಾರಿ ಅವರು ಮಾತನಾಡಿ ಕಾಲೇಜುಗಳಲ್ಲಿ ಸಿಗುವ ವಿದ್ಯೆ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸೌರಭ ಕಲಾ ಪರಿಷತ್ ಮಂಗಳೂರು ಇದರ ನಿರ್ದೇಶಕಿ ಡಾ. ವಿದ್ಯಾ ಮಾತನಾಡಿ ಸರಕಾರಿ ಹುದ್ದೆಗಳನ್ನೇ ನೀರಿಕ್ಷೀಸುವ ಬದಲು. ನಮ್ಮಲ್ಲಿರುವ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಬಳಸಿಕೊಂಡರೆ ಸಮಾಜದ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯ ಎಂದು ಅವರುವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣಪತಿ ಗೌಡ. ಎಸ್ ಮಾತನಾಡಿ ನಿರ್ಗಮನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಲಲಿತಾ ಕಲಾ ಸಂಘ ಸಹ ನಿರ್ದೇಶಕಿ ಡಾ. ನಾಗರತ್ನ ಕೆ.ಎ,
ಲಲಿತಾ ಕಲಾ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಸುಪ್ರಿತ ಬಿ.,ಸಹ ಕಾರ್ಯದರ್ಶಿ ಶಿವಾನಿ.ಕೆ ವಿದ್ಯಾರ್ಥಿ ಸಂಘದ ಉಪ ನಿರ್ದೇಶಕ ಪ್ರೊ.ಜಯವಂತ್ ನಾಯಕ್,ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾರ್ತಿಕ್ ಆಚಾರಿ, ಕಾರ್ಯದರ್ಶಿ ನಿಧಿ ಉಪಸ್ಥಿತರಿದ್ದರು.





