ಮಲ್ಪೆ: ಮೇ 15- 31ರವರೆಗೆ ಭಜನಾ ಕಮ್ಮಟ, ಕೃಷಿಮೇಳ, ಮಾತೃ ವಂದನಾ ಕಾರ್ಯಕ್ರಮ
May 12, 2026
ಉಡುಪಿ:ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಮಲ್ಪೆ, ಶ್ರೀಕೃಷ್ಣಾಪುರ ಮಠ, ಶ್ರೀಅದಮಾರು ಮಠ, ಶ್ರೀಪಲಿಮಾರು ಮಠ, ಶ್ರೀಪೇಜಾವರ ಮಠ, ಶ್ರೀಸೋದೆ ವಾದಿರಾಜ ಮಠದ ಶ್ರೀಪಾದಂಗಳವರ ಸಂಕಲ್ಪದಂತೆ, ಹಾಗೂ ಶ್ರೀ ಈಶಪ್ರಿಯತೀರ್ಥರ ನೇತೃತ್ವದಲ್ಲಿ ಶ್ರೀಕೃಷ್ಣನು ಮಧ್ವರ ಭಕ್ತಿಗೆ ಒಲಿದು ಕಾಣಿಸಿಕೊಂಡು ಅವರ ಕೈ ಸೇರಿದ ಮಲ್ಪೆ ಕಡಲತೀರದ ‘ಶ್ರೀಆನಂದ ಶರದಿ’ ಎಂಬ ಪ್ರತಿಷ್ಠಾನದ ನೂತನ ನಿವೇಶನದಲ್ಲಿ ಮೇ 15 ರಿಂದ 31 ರವರೆಗೆ “ಅಧಿಕ ಜೇಷ್ಠ ಭಕ್ತಿಸುಧಾ ಭಜನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ವೈವಿಧ್ಯಮಯ ಧಾರ್ಮಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳೂ ನಡೆಯಲಿರುವುದು. ಮೇ15 ಸಂಜೆ 4 ಗಂಟೆಗೆ ಹಲಸು- ಮಾವು, ಕೃಷಿಮೇಳದ ಉದ್ಘಾಟನೆ.
ಮೇ18 ಮಧ್ಯಾಹ್ನ 3.30 ಗಂಟೆಗೆ ವಡಭಾಂಡೇಶ್ವರದ ಬಲರಾಮ ದೇವಸ್ಥಾನದಿಂದ ‘ಶ್ರೀಆನಂದ ಶರಧಿ’- ಮಲ್ಪೆಯ ಕಡಲತೀರದ ಪ್ರತಿಷ್ಠಾನದ ನೂತನ ನಿವೇಶನದವರೆಗೆ ಗಣ್ಯರೊಂದಿಗೆ ಭವ್ಯ ಶೋಭಾಯಾತ್ರೆ, ಬಳಿಕ ಭಜನಾ ಸ್ಪರ್ಧೆಯ ಉದ್ಘಾಟನೆ.
ಮೇ 24 ಬೆಳಿಗ್ಗೆ 7.00 ಗಂಟೆಗೆ ಗ್ರಾಮೀಣ ಕ್ರೀಡಾ ಸ್ಪರ್ಧೆಯ ಉದ್ಘಾಟನೆ.
ಮೇ31 ಸಂಜೆ 4 ರಿಂದ ಭಜನಾ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ.
ತಾರೀಕು 12-05-2026 ರಂದು ಶ್ರೀಅದಮಾರು ಮಠದ ಗೆಸ್ಟ್ ಹೌಸ್ ನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಗೌರವ ಸಂಚಾಲಕ ಯಶಾಲ್ ಎ. ಸುವರ್ಣ, ಕಾರ್ಯದರ್ಶಿಗಳಾದ ರತ್ನಕುಮಾರ್, ಪ್ರಧಾನ ಸಂಚಾಲಕರಾದ ಶ್ರೀಶ ಭಟ್ ಕಡೆಕಾರು, ಸಂಚಾಲಕರಾದ ದಿನೇಶ್ ಪುತ್ರನ್ ಮಲ್ಪೆ, ಮಂಜು ಕೊಳ ಮಲ್ಪೆ, ಆರ್ಥಿಕ ಸಲಹೆಗಾರರಾದ ಸಿಎ ಗಣೇಶ್ ಹೆಬ್ಬಾರ, ಕೃಷ್ಣಮೂರ್ತಿ ಕೆದ್ಲಾಯ, ಮಹಿಳಾ ಸಂಚಾಲಕಿಯರಾದ ತಾರಾ ಯು.ಆಚಾರ್ಯ, ನಳಿನಿ ಪ್ರದೀಪ್ ಕುಮಾರ್, ಸುಮಿತ್ರಾ ಕೆರೆಮರ, ಸಂಘಟನಾ ಕಾರ್ಯದರ್ಶಿಗಳಾದ ಪುರುಷೋತ್ತಮ್ ಅಡ್ಡೆ, ವಿಜಯ ಕೊಡವೂರು, ರಾಧಾಕೃಷ್ಣ ಮೆಂಡನ್ ಮಲ್ಪೆ, ಪ್ರೀತಂ ಭಟ್, ಅರುಣ್ ಕುಂದರ್, ಹಾಗೂ ಗೋವಿಂದರಾಜ್, ಮಂಜು ಕೊಳ, ಚಂದ್ರಕಾಂತ್, ರಾಧಾಕೃಷ್ಣ ಮೆಂಡನ್, ಸಂತೋಷ್ ಕುಮಾರ್, ಸುಮಿತ್ರಾ ಕೆರೆಮಠ ಮೊದಲಾದವರು ಉಪಸ್ಥಿತರಿದ್ದರು.