ದೇಶವನ್ನು ಉದ್ದೇಶಿಸಿ ಮೋದಿ ಭಾಷಣ: ಪ್ರಧಾನಿ ಮಹಿಳೆಯರ ಕ್ಷಮೆಯಾಚಿಸಿದ್ದೇಕೆ?
ನವದೆಹಲಿ: ವಿರೋಧ ಪಕ್ಷಗಳು ಮಹಿಳಾ ಮೀಸಲಾತಿಗೆ ವಿರುದ್ಧವಾಗಿ ಮತ ಚಲಾಯಿಸುವ ಮೂಲಕ ಅತಿ ದೊಡ್ಡ ತಪ್ಪು ಮಾಡಿವೆ. ಶೀಘ್ರದಲ್ಲೇ ಅದಕ್ಕೆ ತಕ್ಕ ಬೆಲೆ ತೆರಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಇಂದು ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಾನು ಭಾರತದ ಪ್ರತಿಯೊಬ್ಬ ಮಹಿಳೆಯರೊಂದಿಗೆ ಮಾತನಾಡಲು ಬಂದಿದ್ದೇನೆ” ಎಂದರು.
ಪ್ರಗತಿಯತ್ತ ಸಾಗುತ್ತಿರುವ ದೇಶದ ಪ್ರತಿಯೊಬ್ಬ ತಾಯಿ, ಸಹೋದರಿಯರನ್ನೂ ನಾನು ಕ್ಷಮೆಯಾಚಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು. ನಿನ್ನೆ ಸಂಸತ್ತಿನಲ್ಲಿ ನಡೆದದ್ದನ್ನು ಮಹಿಳೆಯರು ಎಂದಿಗೂ ಮರೆಯುವುದಿಲ್ಲ, ಅವರು ವಿರೋಧ ಪಕ್ಷಗಳಿಗೆ ತಕ್ಕ ಪಾಠ ಕಲಿಸುತ್ತಾರೆ. ಶಿಕ್ಷೆ ಖಂಡಿತ ಎಂದು ಹೇಳಿದರು.





