ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲು!
ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ ಸೇರಿದಂತೆ ಮೂರು ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ. ಮಸೂದೆಗಳ ಪರವಾಗಿ 278 ಸದಸ್ಯರು ಮತ ಚಲಾಯಿಸಿದ್ದರೆ, ಮಸೂದೆಗಳ ವಿರುದ್ಧವಾಗಿ 211 ಸದಸ್ಯರು ಮತ ಚಲಾಯಿಸಿದ್ದಾರೆ. ಒಟ್ಟಾರೆ 489 ಸದಸ್ಯರು ಮತ ಚಲಾಯಿಸಿದ್ದರು. ಮಸೂದೆಗಳು ಅಂಗೀಕೃತಗೊಳ್ಳಲು 326 ಸದಸ್ಯರ ಬೆಂಬಲ ಬೇಕಿತ್ತು.
2026ರ ಸಂವಿಧಾನ (131 ನೇ ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲು ಕೇಂದ್ರಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿತ್ತು. ಆದರೆ 489 ಮತಗಳಲ್ಲಿ 278 ಮತಗಳು ಮಸೂದೆಯ ಪರವಾಗಿ ಚಲಾವಣೆಯಾಗಿದ್ದರೆ 211 ಮತಗಳು ವಿರುದ್ಧವಾಗಿ ಚಲಾವಣೆಯಾದವು. ಮಹಿಳಾ ಮೀಸಲಾತಿ ಮಸೂದೆಯು ಸಾಂವಿಧಾನಿಕ ತಿದ್ದುಪಡಿಗೆ ಅಗತ್ಯವಾದ 2/3 ಮೆಜಾರಿಟಿ ಪಡೆಯುವಲ್ಲಿ ಎನ್.ಡಿ.ಎ. ಸರ್ಕಾರ ವಿಫಲವಾಗಿದೆ. ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದ್ದರಿಂದ ಕಲಾಪವನ್ನು ನಾಳೆ ಮುಂದೂಡಲಾಗಿದೆ.





