ಯಶ್‌ಪಾಲ್ ದನದ ಮೇವಿಗಿಂತ ಕೊರಗ ಪೌಷ್ಟಿಕ ಆಹಾರದ ಬಗ್ಗೆ ಮಾತನಾಡಲಿ: ಶ್ಯಾಮರಾಜ್ ಬಿರ್ತಿ

ಉಡುಪಿ, ಜು.10: ಈ ಸಮಾಜದ ಕಟ್ಟಕಡೆಯ ಸಮುದಾಯ ಆಗಿರುವ ಕೊರಗರಿಗೆ ಕಳಪೆ, ಕಲಬೆರಕೆಯ ಆಹಾರ ಪೂರೈಕೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದೇವೆ. ನಮ್ಮ ಜನಪ್ರತಿನಿಧಿಯಾಗಿ ಮನುಷ್ಯರ ಆಹಾರದ ಬಗ್ಗೆ ಧ್ವನಿ ಎತ್ತದ ಶಾಸಕ ಯಶ್‌ಪಾಲ್ ಸುವರ್ಣ, ಪ್ರಾಣಿಗಳ ಮೇವಿನ ಬಗ್ಗೆ ಅತೀವ ಕಾಳಜಿ ವಹಿಸುವುದು ದುರಂತವೇ ಸರಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಟೀಕಿಸಿದ್ದಾರೆ.

ಅಪೌಷ್ಟಿಕತೆಯಿಂದ ಇಡೀ ಕೊರಗ ಜನಾಂಗವೇ ನಶಿಸುತ್ತಿರುವ ಈ ಸಂದರ್ಭದಲ್ಲಿ ಒಂದು ಪ್ರಾಣಿಯ ಬಗ್ಗೆ ಸಚಿವರಿಗೆ ಪತ್ರ ಬರೆದಿರುವ ಯಶಪಾಲ್ ಸುವರ್ಣರ ಬಗ್ಗೆ ಸೋಜಿಗವೆನಿಸುತ್ತದೆ. ಅಲ್ಲದೇ ಇಲ್ಲೇ ಪಕ್ಕದ ಬಾರಕೂರು ಹನೆಹಳ್ಳಿಯ ಸೆಂಟ್ರಿಂಗ್ ಕೆಲಸ ಮಾಡುವ ಕೃಷ್ಣ ಎಂಬ ದಲಿತ ಯುವಕನನ್ನು ಅಪರಿಚಿತರು ಶೂಟೌಟ್ ಮಾಡಿದ ಬಗ್ಗೆಯೂ ಅವರು ಧ್ವನಿ ಎತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಅತೀ ಹೆಚ್ಚು ದನದ ಮಾಂಸವನ್ನು ರಫ್ತು ಮಾಡುವ ದೇಶಗಳಲ್ಲಿ ಭಾರತ ಪ್ರಪಂಚದಲ್ಲೇ ಎರಡನೇ ಸ್ಥಾನದಲ್ಲಿದೆ. ಇದರ ಕನಿಷ್ಠ ಜ್ಞಾನವೂ ಅವರಿಗೆ ಇಲ್ಲದಂತಿದೆ. ದನ ಎನ್ನುವ ಪ್ರಾಣಿಯು ತಮಗೆ ಗೋಮಾತೆಯಾದರೆ ದಯವಿಟ್ಟು ಅದನ್ನು ಮನೆಯಲ್ಲಿ ಕಟ್ಟಿಕೊಂಡು ಪೂಜಿಸಿ, ಅದಕ್ಕೆ ಯಾರ ಅಭ್ಯಂತರವಿಲ್ಲ. ಆದರೆ ದೇಶಾದ್ಯಂತ ಇರುವ ದನದ ಮಾಂಸದವನ್ನು ರಫ್ತು ಮಾಡುವ ಕಾರ್ಖಾನೆಯನ್ನು ಮುಚ್ಚಿಸುವ ಬಗ್ಗೆ ಮಾತನಾಡದೇ, ಕೇವಲ ಇಲ್ಲಿ ಮಾತ್ರ ಗೋವಿನ ಹೆಸರಿನಲ್ಲಿ ಕೆಳವರ್ಗದ ಯುವಕರನ್ನು, ದಲಿತರನ್ನು ಎತ್ತಿಕಟ್ಟಿ, ಅವರ ಮೇಲೆ ಕೇಸು ಬೀಳಿಸಿ, ಜೈಲಿಗಟ್ಟಿ ತಮ್ಮ ರಾಜಕೀಯ ಬೇಳೆಯನ್ನು ದಯವಿಟ್ಟು ಬೇಯಿಸಿಕೊಳ್ಳಬೇಡಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1 thought on “ಯಶ್‌ಪಾಲ್ ದನದ ಮೇವಿಗಿಂತ ಕೊರಗ ಪೌಷ್ಟಿಕ ಆಹಾರದ ಬಗ್ಗೆ ಮಾತನಾಡಲಿ: ಶ್ಯಾಮರಾಜ್ ಬಿರ್ತಿ

  1. ನಮ್ಮ ಪೂರ್ವಜರು ಅನುಸರಿಸಿ ಬಂದಂತೆ ಆದಿ ಕಾಲದಿಂದ ಕೆಲ ಸಮುದಾಯದ ಮೂಲ ನಿವಾಸಿಗಳು ಪಶುಗಳ ಮಾಂಸಾ ಬಕ್ಷಿಸುತ್ತಿದ್ದರು. ಇಂದು ಕೆಲ ಪಂಗಡದ ವರು ಸೇವಿಸುತ್ತಿದ್ದಾರೆ
    ಹಿಂದಿನ ಕಾಲದಲ್ಲಿ ಚರ್ಮದ ಪಾದ ರಕ್ಷೆಗೆ ಚಪ್ಪಲಿಗೆ ಡೋಲು ಧಕ್ಕೆಗೆ ಚಂಡೆಗೆ ಹದ ಮಾಡಿದ ಚರ್ಮ ಪ್ರಾಣಿಗಳಿಂದ.
    ದೇವರಿಗೆ ದೇವಸ್ಥಾನ ಮೆರವಣಿಗೆಗೆ ಚರ್ಮದ ಡೋಲು ದಕ್ಕೆ ಡಮರು ಬೇಕಾಗುತ್ತದೆ.

    ಕೆಲ ವರುಷಗಳ ಹಿಂದೆ ಗುಜರಾತಿನಲ್ಲಿ ಚರ್ಮದ ಕೆಲಸ ಮಾಡುತ್ತಿರುರ ದಲಿತ ಚಮ್ಮರರ
    ಮೇಲೆ ಹಲ್ಲೆ ಮಾಡಿ ಇಂದು ಜೈಲು ಪಾಲಾದರು.
    ಇಂದು ಕೆಲ ಮೃಗಾಲಯದಲ್ಲಿ ಹುಲಿಗಳಿಗೆ ಕೊಡುತ್ತಿರುವುದು ಅದೇ ಮೌಸ

Leave a Reply

Your email address will not be published. Required fields are marked *

error: Content is protected !!