ನೀವು ಯೋಚನೆಯಿಂದ ಬಳಲುತ್ತಿದ್ದೀರಾ..? ಇದರಿಂದ ದೂರ ಇರಲು ಈ ಸಲಹೆ ಅನುಸರಿಸಿ..!

ಇಂದಿನ ದಿನಗಳಲ್ಲಿ ಜನರು ತಾವು ಮಾಡುವ ಕೆಲಸಕ್ಕಿಂತ ಹೆಚ್ಚು ಬಾರಿ ಯೋಚಿಸಿ ಯೋಚನೆಯಲ್ಲೇ ಕಳೆಯುತ್ತಾರೆ. ಈ ಅತಿಯಾದ ಯೋಚನೆ ನಿಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ತುಂಬಾ ಆಲೋಚನೆ ಮಾಡುವುದರಿಂದ ಅಥವಾ ಯೋಚನೆ ಮಾಡುವುದರಿಂದ ನಿಮಗೆ ಯಾವುದೇ ತರಹದ ಉಪಯೋಗವಿಲ್ಲ. ಬದಲಾಗಿ ನಿಮ್ಮ ಆರೋಗ್ಯವೇ ಹಾಳಾಗುತ್ತವೆ. ಹಾಗೂ ನೀವು ದಿನಪೂರ್ತಿ ಕೆಲಸ ಮಾಡಿ ರಾತ್ರಿ ಮಲಗಲು ಹೋದಾಗ ನಿಮಗೆ ಯೋಚನೆಗಳು ಕಾಡುತ್ತಾ ಇರುತ್ತವೆ. ಅಂದರೆ ಕೆಲಸ ಮುಗಿದು ನೀವು ಮಲಗಿಕೊಳ್ಳಲು ಹೋದಾಗ ನೀವು ಮಾಡಿದ ಕೆಲಸದ ಬಗ್ಗೆಯೇ ನೀವು ಯೋಚನೆ ಮಾಡುತ್ತಾ ಇರುತ್ತೀರಿ. ಇದು ನಿಮಗೆ ನಿದ್ರಾಹೀನತೆಗೆ ಕಾರಣವಾಗುತ್ತದೆ. ಸರಿಯಾಗಿ ನಿದ್ರೆ ಮಾಡದಿದ್ದರೆ ನಿಮ್ಮ ದೇಹವು ದುರ್ಬಲವಾಗುತ್ತದೆ. ಇದು ನಿಮ್ಮ ಮೆದುಳಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ನೀವು ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು ಬಿಡಲು ಈ ಕೆಲವೊಂದು ಕ್ರಮಗಳನ್ನು ಅನುಸರಿಸಿ.

ರಾತ್ರಿ ಮಲಗುವಾಗ ನಿಮ್ಮ ಪಾದವನ್ನು ಎಣ್ಣೆಯಿಂದ ಮಸಾಜ್ ಮಾಡುವುದರಿಂದ ದೇಹದಲ್ಲಿ ಸಮತೋಲನ ಸೀಮಿತವಾಗಿರುತ್ತದೆ ಹಾಗೂ ನಿಮಗೂ ಕೂಡ ಇದರಿಂದ ಆರಾಮ ಅನಿಸುತ್ತದೆ. ಆಗ ನೀವು ಕೂಡಲೇ ನಿದ್ರೆ ಮಾಡುತ್ತೀರಿ. ಇದು ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಹಾಗೆಯೇ ಎಣ್ಣೆಯಿಂದ ತಲೆ ಮಸಾಜ್ ಮಾಡಿಕೊಳ್ಳಿ. ದಿನವಿಡೀ ಆಯಾಸದಿಂದ ಕೂಡಿರುವ ಕೆಲಸವನ್ನು ಮಾಡಿರುತ್ತೀರಿ. ಇದರಿಂದ ಒತ್ತಡ ಆತಂಕವೂ ಕೂಡ ನಿಮ್ಮನ್ನು ಕಾಡುತ್ತಿರುತ್ತದೆ. ಆದ್ದರಿಂದ ತಲೆಗೆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡುವುದರಿಂದ ನಿಮ್ಮ ಮೈಂಡ್ ಕೂಡ ಫ್ರೀ ಆಗಿರುತ್ತದೆ. ಅಲ್ಲದೇ ನಿದ್ರೆ ಬೇಗ ಬರುತ್ತದೆ. ಹಾಲು ಕುಡಿಯುವುದರಿಂದ ನಮ್ಮ ಒತ್ತಡ ಕಡಿಮೆಯಾಗಿ ಆತಂಕವು ಕಡಿಮೆಯಾಗುತ್ತದೆ ಹಾಗೂ ಆಲೋಚನೆಗಳು ಬರುವುದಿಲ್ಲ ಕೂಡಲೇ ನಿದ್ರೆಯು ಆವರಿಸುತ್ತದೆ. ಆದ್ದರಿಂದ ಈ ಮೇಲಿನ ಸಲಹೆಗಳನ್ನು ಮಾಡಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಹೀಗಾಗಿ ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟುಬಿಡಿ.

Leave a Reply

Your email address will not be published. Required fields are marked *

error: Content is protected !!