ಮೂಡುಬೆಳ್ಳೆ: ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧದ ಮರ ಕಳವು
ಶಿರ್ವ: ಮೂಡುಬೆಳ್ಳೆಯ ಖಾಲಿ ಜಾಗದಲ್ಲಿ ಬೆಳೆಸಿದ್ದ ಎರಡು ಶ್ರೀಗಂಧ ಮರಗಳನ್ನು ಕಳ್ಳರು ಕಡಿದು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡುಬೆಳ್ಳೆಯ ಸತೀಶ ಎಂಬವರ ತಾಯಿ ಗುಲಾಬಿ ಅವರ ಹೆಸರಿನ ಜಾಗದಲ್ಲಿ ಶ್ರೀಗಂಧದ ಮರವನ್ನು ಬೆಳೆಸಿದ್ದು, ಈ ಮರಗಳಿಗೆ 40 ವರ್ಷ ಆಗಿದೆ. ಈ ಎರಡು ಮರಗಳ ಮೌಲ್ಯ ಎರಡು ಲಕ್ಷ ರೂ. ಎಂದು ಅಂದಾಜಿಸ ಲಾಗಿದೆ. ಮೇ 29ರಂದು ಕಳ್ಳರು ಈ ಎರಡು ಮರಗಳನ್ನು ಬುಡದಿಂದ ಕತ್ತರಿಸಿ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.





