ಉಡುಪಿಯ ಖಡಕ್ ಎಸ್ಪಿ ಡಾ.ಅರುಣ್ ಕುಮಾರವರಿಗೆ ಧನ್ಯವಾದ…

ಉಡುಪಿ ವಿದ್ಯಾವಂತರ ಹಾಗೂ ಸೌಹಾರ್ದ ಜಿಲ್ಲೆ ಕೋಮು ಸೂಕ್ಷ್ಮ ಪ್ರದೇಶವಾಗಿ ಬದಲಾಗಿ ರಾಜಕೀಯ ಸ್ವಾರ್ಥದಿಂದ ದಿನ ಬೆಳಿಗ್ಗದರೆ ಕೋಮು ಗಲಭೆಗಳು ದ್ವೇಷ ಭಾಷಣಗಳು, ಮಟ್ಕಾ, ಇಸ್ಪೀಟ್, ಕೋಳಿ ಅಂಕ, ದಂಧೆಗಳು, ಅಕ್ರಮ ಮರಳು ಗಣಿಗಾರಿಕೆ, ರಾತ್ರಿಯಾದರೆ ಪುಂಡರ ಗಲಭೆ, ಗಾಂಜಾ, ಡ್ರಗ್ಸ್,12 ಗಂಟೆಯಾದರೂ ತೆರೆದಿರುವ ಬಾರ್, ಅಕ್ರಮ ಮದ್ಯ ಮಾರಾಟ, ಕ್ರಿಮಿನಲ್ ಚಟುವಟಿಕೆಗಳು ನಡೆಯುತ್ತಿದವು ಇಂತಹ ಸಮಾಜಘಾತುಕ ಶಕ್ತಿಗಳಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿರುವುದು ದ ಗ್ರೇಟ್ ದಕ್ಷ ಅಧಿಕಾರಿ ಡಾ ಅರುಣ್ ಕುಮಾರ್, ಎಲ್ಲಾ ಪಕ್ಷಗಳ ಸಮಾಜಘಾತುಕ ಶಕ್ತಿಗಳ ಒಕ್ಕೊರಲ ಬೇಡಿಕೆ ಎಸ್ಪಿ ಅವರನ್ನು ವರ್ಗಾವಣೆ ಮಾಡಬೇಕೆಂದು, ನಾನು ಸರ್ಕಾರದಲ್ಲಿ ಕೇಳಿಕೊಳ್ಳುವುದು ಇಷ್ಟೇ ಯಾರ ಒತ್ತಡಕ್ಕೂ ಮಣಿಯದೆ ಎಸ್ಪಿ ಯವರನ್ನು ಉಡುಪಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲು ಸರ್ಕಾರದ ಹೆಚ್ಚಿನ ಭದ್ರತೆಯೊಂದಿಗೆ ಅವಕಾಶ ಮಾಡಿಕೊಡಬೇಕು ಇಲ್ಲಿನ ಸಮಾಜಘಾತುಕ ಶಕ್ತಿಗಳನ್ನು ಸಂಪೂರ್ಣವಾಗಿ ನಾಶಗೊಳಿಸಬೇಕು

ಉಡುಪಿ ಕಾಂಗ್ರೆಸ್ ನಾಯಕರ ಮೃದು ಧೋರಣೆಗೆ ಒಪ್ಪಿ ಸರ್ಕಾರ ಎಸ್ಪಿಯವರನ್ನು ವರ್ಗಾವಣೆ ಮಾಡಿದ್ದೆ ಆದರೇ, ಅದರ ಲಾಭ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ಸಿಗುವುದಿಲ್ಲ. ಇದರ ಸಂಪೂರ್ಣ ಲಾಭವನ್ನು ಬಿಜೆಪಿ ಪಡೆದು ತನ್ನ ಹಳೆ ಚಾಳಿಯನ್ನು ಮುಂದುವರಿಸುತ್ತದೆ, ತುಸು ಶಾಂತಿ ನೆಮ್ಮದಿ ಸೌಹಾರ್ದತೆಯಲ್ಲಿರುವ ಈ ಜಿಲ್ಲೆ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿ ಆಗುತ್ತದೆ, ಕಾಂಗ್ರೆಸ್ ಪಕ್ಷ ಎಷ್ಟೇ ಜನ ಉಪಯೋಗಿ ಯೋಜನೆಗಳನ್ನು ತಂದರೂ ಈ ಭಾಗದ ಜನರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವುದಿಲ್ಲ ಇಲ್ಲಿನ ಜನರಿಗೆ ನಿಮ್ಮ ಋಣ ಇಲ್ಲದಿರುವಾಗ ಇಡಿ ರಾಜ್ಯಕ್ಕೆ ಕೋಮು ದ್ವೇಷವನ್ನು ಹೊರಡಿಸುವ ಈ ಭಾಗದ ಫ್ಯಾಕ್ಟರಿಗಳ ಬಗ್ಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬೇಡಿ.

ಮಾನ್ಯ ಎಸ್ಪಿಯವರೆ ನೀವು ಇರುವಷ್ಟು ದಿವಸ ಈ ಭಾಗದ ಸಮಾಜಘಾತಕ ಶಕ್ತಿಗಳನ್ನು ಸದೆ ಬಡಿಯಬೇಕು ಈ ಜಿಲ್ಲೆಯನ್ನು ಶಾಂತಿ ನೆಮ್ಮದಿ ಸೌಹಾರ್ದತೆಯ ನಾಡನಾಗಿ ಮಾಡಬೇಕು ನಿಮ್ಮ ಬೆಂಬಲಕ್ಕೆ ಸಜ್ಜನ ವಿದ್ಯಾವಂತ ಪ್ರಬುದ್ಧ ಜನರಿದ್ದಾರೆ…..

ಎಸ್ಪಿಯವರೊಂದಿಗೆ ನಾವಿದ್ದೇವೆ….

ಉಡುಪಿ ಪ್ರಜ್ಞಾವಂತ ಸಮಾಜದ ನಾಗರಿಕ

Leave a Reply

Your email address will not be published. Required fields are marked *

error: Content is protected !!