ಊರಿನ ಗ್ರಾಮಸ್ಥರು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ- ಎನ್. ಟಿ.ಅಮೀನ್

ಮಲ್ಪೆ,: ಶ್ರೀವಡಭಾಂಡ ಬಲರಾಮ ದೇವಸ್ಥಾನದ ಬ್ರಹ್ಕಲಶೋತ್ಸವ ಅಂಗವಾಗಿ ಮಂಗಳವಾರ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಎನ್. ಟಿ. ಅಮೀನ್ ಮಾತನಾಡಿ ಊರಿನ ಗ್ರಾಮಸ್ಥರು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ.ಸಂಸ್ಕಾರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕಲಿಸಿ ಸಮಾಜ ಉಳಿಸಬೇಕಾಗಿದೆ ಎಂದರು. ದೇವಸ್ಥಾನ ಇನ್ನೂ ಹೆಚ್ಚು ಬೇಳಗುವಂತಾಗ ಬೇಕು ಎಂದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಉಡುಪಿ ನಗರ ಸಭೆಯ ವಿಪಕ್ಷ ನಾಯಕ ರಮೇಶ್ ಕಾಂಚನ್, ನಗರ ಸಭೆಯ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ, ಸ್ಮರಣಿಕ ಉಡುಪಿ ಮಾಲಕ ದಿವಾಕರ ಸನಿಲ್, ಸಮಾಜ ಸೇವಕ ಗಣೇಶ್ ನೆರ್ಗಿ, ಅಭಿವೃದ್ದಿ ಮಂಡಳಿ ಅಧ್ಯಕ್ಷ ನಾಗರಾಜ್ ಮೂಲಿಗಾರ್, ಪ್ರಧಾನ ಕಾರ್ಯದರ್ಶಿ ಶಶಿಧರ್ ಅಮೀನ್ ಉಪಸ್ಥಿತರಿದ್ದರು.

ಬ್ರಹ್ಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿ, ಪಾಂಡುರಂಗ ಮಲ್ಪೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಸಹನಾ ಕೃಷ್ಣರಾಜ ಭಟ್ ಮತ್ತು ಬಳಗದವರಿಂದ ಭಕ್ತಿ ಸಂಗೀತ, ವಿದುಷಿ ಶರ್ಮಿಳಾ ರಾವ್ ಮತ್ತು ಶಿಷ್ಯರಿಂದ ವಯೋಲಿನ್ ಕಚೇರಿ ನಡೆಯಿತು.

ಸಭಾ ಕಾರ್ಯಕ್ರಮದ ಬಳಿಕ ರಜತ ತಂತ್ರಿ ಕೊಡವೂರು ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಪೂರ್ಣಿಮಾ ಜನಾರ್ದನ್ ಕೊಡವೂರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!