ಬೆಳ್ತಂಗಡಿ: ಆಟೋ ರಿಕ್ಷಾ ಡಿಕ್ಕಿ- ಮೂರು ವರ್ಷದ ಮಗು ಮೃತ್ಯು

ಬೆಳ್ತಂಗಡಿ: ಆಟೋ ರಿಕ್ಷಾ ಡಿಕ್ಕಿಯಾಗಿ ಮೂರು ವರ್ಷದ ಕಂದಮ್ಮ ಸಾವನ್ನಪ್ಪಿರುವ ಘಟನೆ ಸೋಣಂದೂರು ಪಣಕಜೆಯಲ್ಲಿ ನಡೆದಿದೆ.ಕೌಶಿಕ್ ಮೃತಪಟ್ಟ ಮಗು.

ಮುಂಡಾಡಿಯಲ್ಲಿ ಚಂದ್ರಶೇಖರ್ ಅವರ ಮನೆ ರಸ್ತೆಯ ಹತ್ತಿರವಿದ್ದು, ಮನೆಯಲ್ಲಿದ್ದ ಮಗು ಮನೆಯವರು ನೋಡದೆ ಓಡಿ ರಸ್ತೆಗೆ ಬಂದಿದೆ ಎನ್ನಲಾಗಿದೆ. ಈ ವೇಳೆ ಮಗುವಿಗೆ ರಿಕ್ಷಾ ತಾಗಿ ಗಂಭೀರ ಗಾಯಗೊಂಡಿದ್ದು, ಮಗುವನ್ನು ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದರೂ, ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ .

ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!