ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿ ಶೂನ್ಯ ದೇಶ ನಮ್ಮದಾಗಿರುವುದು ನಮ್ಮ ದುರಂತ- ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ: ನಮ್ಮ ಭಾರತ ದೇಶವು ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ 1947ರಿಂದ ನಿರಂತರವಾಗಿ ಅಭಿವೃದ್ಧಿಯನ್ನು ಹೊಂದುತ್ತಾ ಪ್ರಪಂಚದಲ್ಲಿ ಮೂರನೇ ಸ್ಥಾನದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನಮ್ಮ ಭಾರತ ದೇಶ ಒಂದಾಗಿತ್ತು.

ಆದರೆ 2014ರಲ್ಲಿ ಬಿಜೆಪಿಯ ಆಡಳಿತದಲ್ಲಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಮ್ಮ ದೇಶ ಅಭಿವೃದ್ಧಿಯಲ್ಲಿ ಸಂಪೂರ್ಣ ಕುಂಟಿತಗೊಂಡು ಇಂದು ನೆರೆಯ ಸಣ್ಣ ರಾಷ್ಟ್ರಗಳಾದ ಬಾಂಗ್ಲಾ ಹಾಗೂ ಶ್ರೀಲಂಕದ ಪರಿಸ್ಥಿತಿಯತ್ತ ನಮ್ಮ ದೇಶ ದಾಪುಕಾಲ್ ಹಾಕುತ್ತಿರುವುದು ನಮ್ಮ ದೇಶದ ಜನರ ದುರಾದೃಷ್ಟ.

ಈ ಬಾರಿಯಾದರೂ ನಮ್ಮ ಭಾರತೀಯರೆಲ್ಲರೂ ಒಂದಾಗಿ ಈ ಕ್ಲಿಷ್ಟ ಪರಿಸ್ಥಿತಿಯಲ್ಲಿರುವ ನಮ್ಮ ದೇಶವನ್ನು ಉಳಿಸಿಕೊಳ್ಳಬೇಕಾಗಿದೆ. ಆದುದರಿಂದ ಬಿಜೆಪಿ ಮತ್ತು ಮೋದಿ ಇದು ಎರಡನ್ನು ಬಿಟ್ಟು ಕಾಂಗ್ರೆಸ್ ಪಕ್ಷದತ್ತ ತಮ್ಮ ಮನಸ್ಸನ್ನು ಬದಲಾವಣೆಗೊಳಿಸಿ. ನಮ್ಮ ದೇಶದ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂಬ ಸತ್ಯವನ್ನು ನಮ್ಮ ಮತದಾರರು ಅರಿತುಕೊಳ್ಳಬೇಕಾಗಿದೆ. ಅದಕ್ಕಾಗಿ ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ನಿಷ್ಕಳಂಕ ಅಭಿವೃದ್ಧಿಯ ಹರಿಕಾರರಾದ ಎಲ್ಲಾ ಜನಸಾಮಾನ್ಯರನ್ನು ಗುರುತಿಸುವಂತಹ ನೆಚ್ಚಿನ ಕಾಂಗ್ರೆಸ್ ಪಕ್ಷದ ನಾಯಕರಾದ ಜಯಪ್ರಕಾಶ್ ಹೆಗ್ಡೆ ಇವರನ್ನು ತಾವು ಗೆಲ್ಲಿಸಬೇಕಾಗಿದೆ. ವಿರೋಧ ಪಕ್ಷದ ಅಭ್ಯರ್ಥಿಗಳಿಗೆ ಅಭಿವೃದ್ಧಿಯೆಂದರೆ ಏನೆಂದೇ ತಿಳಿದಿಲ್ಲ ಸಂಘ ಪರಿವಾರ ಹಾಗೂ ಮೋದಿ ಬಿಟ್ಟರೆ ಮೂರನೇದು ಅವರಿಗೆ ಗೊತ್ತೇ ಇಲ್ಲದಂತ ಪರಿಸ್ಥಿತಿಯಲ್ಲಿ ಇವರಿದ್ದಾರೆ. ಆದ ಕಾರಣ ಈ ಬಾರಿ ನಮ್ಮ ಕ್ಷೇತ್ರದ ಮತದಾರರು ಎಚ್ಚೆತ್ತುಕೊಂಡು ನಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಂತ ಕಾಂಗ್ರೆಸ್ ಪಕ್ಷದ ನಾಯಕನನ್ನು ಗೆಲ್ಲಿಸುವಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

2 thoughts on “ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿ ಶೂನ್ಯ ದೇಶ ನಮ್ಮದಾಗಿರುವುದು ನಮ್ಮ ದುರಂತ- ಸುರೇಶ್ ಶೆಟ್ಟಿ ಬನ್ನಂಜೆ

  1. Namma desha alla, Namma rajjya karnataka Mella mellane bangla, srilankada hadige hogitta untu conress adalithada karana

Leave a Reply

Your email address will not be published. Required fields are marked *

error: Content is protected !!