ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್: ಶೇ‌. 96.15% ಫಲಿತಾಂಶ

ಕುಂದಾಪುರ: ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್: ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಹಾಗೂ ಆರೋಗ್ಯ ವಿಜ್ಞಾನವು ನಡೆಸಿರುವ 2023-24 ನೇ ಸಾಲಿನ ಬಿ.ಎಸ್ಸಿ. ನರ್ಸಿಂಗ್ ಪರೀಕ್ಷೆಯಲ್ಲಿ ತೃತೀಯ ವರ್ಷದ 26 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 8 ವಿದ್ಯಾರ್ಥಿಗಳು ಉನ್ನತ ಶ್ರೇಣಿಯನ್ನು ಪಡೆದಿರುತ್ತಾರೆ, 16 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 1 ವಿದ್ಯಾರ್ಥಿ ದ್ವಿತೀಯ ದರ್ಜೆ ಶ್ರೇಣಿಯನ್ನು ಪಡೆದು ಶೇ. 96.15% ಗಳಿಸಿರುತ್ತಾರೆ.

ದ್ವಿತೀಯಾ ವರ್ಷದ 41ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು,1 ವಿದ್ಯಾರ್ಥಿ ಉನ್ನತ ಶ್ರೇಣಿಯನ್ನು ಪಡೆದಿದ್ದು,20 ವಿದ್ಯಾರ್ಥಿಗಳು ಪ್ರಥಮಶ್ರೇಣಿ ಹಾಗೂ 12 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಶ್ರೇಣಿಯನ್ನು ಪಡೆದು ಶೇಕಡ 80.48% ಗಳಿಸಿರುತ್ತಾರೆ. ದ್ವಿತೀಯ ಸೆಮಿಸ್ಟರ್ 38 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು,1 ವಿದ್ಯಾರ್ಥಿ A+, 2 ವಿದ್ಯಾರ್ಥಿ A, 26 ವಿಧ್ಯಾರ್ಥಿಗಳು B+, 7 ವಿಧ್ಯಾರ್ಥಿಗಳು B ಶ್ರೇಣಿಯನ್ನು ಪಡೆದು ಶೇಕಡ 94.73% ಗಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!