ಮಂಗಳೂರು: ಖಾಸಗಿ ಬಸ್ ಮಾಲಕ ನೇಣಿಗೆ ಶರಣು

ಮಂಗಳೂರು: ನಗರದಲ್ಲಿ ಖಾಸಗಿ ಬಸ್‌ ವ್ಯವಹಾರ ನೋಡಿಕೊಳ್ಳುತ್ತಿದ್ದ ಉದ್ಯಮಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದವರು ನಗರದ ಬಜಾಲ್‌ ನಿವಾಸಿ ಪ್ರಜ್ವಲ್‌ ಡಿ. (35) ಎಂದು ತಿಳಿದು ಬಂದಿದೆ. ಇವರು ಭವಾನಿ ಬಸ್‌ನ ಮಾಲಕರಾಗಿದ್ದ ದೇವೇಂದ್ರ ಅವರ ಎರಡನೇ ಪುತ್ರ. ಮಂಗಳವಾರ ಬೆಳಗ್ಗೆ ಜೆ.ಎಂ. ರೋಡ್‌ನ‌ಲ್ಲಿರುವ ಸ್ವಗೃಹದಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ಸಹೋದರ ಬಸ್‌ನ ಮಾಲಕ ರಾಗಿದ್ದರು. ಪ್ರಜ್ವಲ್‌ ಅದೇ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಸಾಲ ಹೊಂದಿದ್ದ ಅವರಿಗೆ ಬ್ಯಾಂಕ್‌ನವರು ಕಿರುಕುಳ ನೀಡುತ್ತಿದ್ದರೆಂಬ ಮಾಹಿತಿ ಇದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಪತ್ನಿ ಮತ್ತು ನಾಲ್ಕು ವರ್ಷದ ಮಗುವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!