ಕಾಪು: ”ಆನಂದ ಲಹರಿ ” ಮಹಾಸತ್ಸಂಗ ಸಂಪನ್ನ

ಕಾಪು : ಅಂತರಾಷ್ಟ್ರೀಯ ಪ್ರಖ್ಯಾತರಾಗಿರುವ, ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಜೀವನ ಕಲಾ ಸಂಸ್ಥೆ ಆರ್ಟ್ ಆಫ್ ಲೀವಿಂಗ್ ನ ಸಂಸ್ಥಾಪಕ, ಪದ್ಮವಿಭೂಷಣ ಶ್ರೀ ರವಿಶಂಕರ್ ಗುರೂಜಿ ಅವರು ಕಾಪುವಿನ ಸಮುದ್ರ ಕಿನಾರೆಯಲ್ಲಿರುವ ಮಂಥನ ಬೀಚ್ ರೆಸಾರ್ಟ್ ನ ಬಳಿ ಮಂಗಳವಾರ “ಆನಂದ ಲಹರಿ” ಮಹಾಸತ್ಸಂಗ ಕಾರ್ಯಕ್ರಮವನ್ನು ಮಂಗಳವಾರ ಸಂಪನ್ನಗೊಂಡಿತು.

ಸಂಪೂರ್ಣ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಹಾಗೂ ಸುದರ್ಶನ ಕ್ರಿಯಾಯೋಗದ ಸ್ಥಾಪಕಾಚಾರ್ಯ ಆಗಿರುವ  ಶ್ರೀ ರವಿಶಂಕರ್ ಗುರೂಜಿಯವರು ದಿವ್ಯ ಸತ್ಸಂಗದಲ್ಲಿ, ವಸುದೈವ ಕುಟುಂಬಕಂ ಉದ್ಘಾರ ಪ್ರಪಂಚಕ್ಕೆ ಕೊಟ್ಟುದ್ದ ಭಾರತ ದೇಶ. ಇದರ ಬಗ್ಗೆ ನಮಗೆ ಹೆಮ್ಮೆ ಇದೆ. ಭಾರತವು ಸನಾತನ ಧರ್ಮ, ನಾಲೆಜ್ ಬೇಸ್ಡ್ ಐಟಿ, ಒಡವೆ ಆಭರಣ-ವಸ್ತ್ರ, ಪ್ರವಾಸೋದ್ಯಮ, ಆಯುರ್ವೇದ, ವೈವಿಧ್ಯಮಯ ಆಹಾರ ಪದ್ಧತಿ, ಕಲೆ-ಸಂಸ್ಕೃತಿ-ಸಿದ್ಧಾಂತಗಳೊಂದಿಗೆ ಭಾರತ ಪ್ರಾಪಂಚಿಕವಾಗಿ ಶ್ರೇಷ್ಠತೆಯನ್ನು ಹೊಂದಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಭಾರತವು ಹಲವು ಸಂಸ್ಕೃತಿಯ ತವರು ನೆಲವಾಗಿದೆ. ಧಾರ್ಮಿಕ ಬದುಕನ್ನು ಒಪ್ಪಿಕೊಂಡು ಅಪ್ಪಿಕೊಂಡಂತಹ ಅಖಂಡ ಭೂಮಂಡಲವೇ ತನ್ನದೆಂದು ಭಾವಿಸಿಕೊಂಡಂತಹ ದೊಡ್ಡ ಸಂತರ ಆಗಮನದಿಂದ ನಮ್ಮ ಭೂಮಿ ಮತ್ತು ಬದುಕು ಧನ್ಯವಾಗಿದೆ ಎಂದರು.

ಅದ್ದೂರಿ ಮೆರವಣಿಗೆಯಲ್ಲಿ ಗುರುದೇವ್ ಶ್ರೀ ರವಿಶಂಕರ ಗುರೂಜಿ ಅವರನ್ನು ಮಂಥನ್ ಬೀಚ್ ರೆಸಾರ್ಟ್ ಬಳಿ ಕಡಲ ಕಿನಾರೆಯಲ್ಲಿನ ಬೃಹತ್ ವೇದಿಕೆಗೆ ಕರೆ ತರಲಾಯಿತು.

ಸತ್ಸಂಗದಲ್ಲಿ ಪಾಲ್ಗೊಂಡ ಸಹಸ್ರಾರು ಜನರಿಗೆ ಬೆಲ್ಲ ಬಳಸಿದ ಶೀರ, ಅವಲಕ್ಕಿ, ಕಡಲೆಯುಕ್ತ ವಿಶೇಷ ಪ್ರಸಾದ ವಿತರಿಸಲಾಯಿತು.

ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನಸಾಗರದ ನಡುವೆ ಸಂಚರಿಸಿದ ಗುರುದೇವ್ ಶ್ರೀರವಿಶಂಕರ ಗುರೂಜಿ ಅವರು ಜನತೆಯ ಭಕ್ತಿ ಬಾವದ ಗೌರವ ಪಡೆದುಕೊಂಡು ಹಾರೈಸಿ, ಪುಷ್ಪದಳ ಪ್ರಸಾದವಾಗಿ ನೀಡಿದಾಗ ಭಕ್ತರು ಭಾವಪರಾವಶರಾದರು.

ಕಾಪು ಶಾಸಕ ಮತ್ತು ಗುರ್ಮೆ ಫೌಂಡೇಷನ್ ಪ್ರವರ್ತಕರಾದ ಗುರ್ಮೆ ಸುರೇಶ್ ಪಿ. ಶೆಟ್ಟಿ ಮತ್ತು ಸಹೋದರರಾದ ಹರೀಶ್ ಪಿ. ಶೆಟ್ಟಿ ಗುರ್ಮೆ, ಸತೀಶ್ ಪಿ. ಶೆಟ್ಟಿ ಗುರ್ಮೆ ನೇತೃತ್ವದಲ್ಲಿ ಎಲ್ಲಾ ಸಮಾಜ ಭಾಂದವರು ಮತ್ತು ಆರ್ಟ್ ಆಫ್ ಲೀವಿಂಗ್ ಬಳಗದವರ ಸಹಭಾಗಿತ್ವದೊಂದಿಗೆ ಆನಂದ ಲಹರಿ ಮಹಾಸತ್ಸಂಗ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಎಂಆರ್‌ಜಿ ಗ್ರೂಪ್ ಬೆಂಗಳೂರು ಸಿಎಂಡಿ ಪ್ರಕಾಶ್ ಶೆಟ್ಟಿ, ರವೀಂದ್ರ, ಶಂಭು ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಪ್ರಮುಖರಾದ ಸೌರಭ್ ಶೆಟ್ಟಿ, ಕಿಶೋರ್ ಕುಮಾರ್‌ ಗುರ್ಮೆ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿತೇಂದ್ರ ಶೆಟ್ಟಿ, ಪೂನಾ ಸಂತೋಷ್ ಶೆಟ್ಟಿ, ರೇಶ್ಮಾ ಉದಯ ಶೆಟ್ಟಿ, ಗೀತಾಂಜಲಿ ಎಂ. ಸುವರ್ಣ, ಶಿಲ್ಪಾ ಜಿ. ಸುವರ್ಣ, ವೀಣಾ ಶೆಟ್ಟಿ, ಸದಾಶಿವ ಕರ್ಕೇರ, ಡಾ.ಕೆ. ಕೃಷ್ಣ ಪ್ರಸಾದ್, ಡಾ.ಜಿ.ಎಸ್.ಚಂದ್ರಶೇಖರ್, ಕೆ. ವಾಸುದೇವ ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ, ಮೊದಲಾದ ಗಣ್ಯರು, ಆರ್ಟ್ ಆಫ್ ಲಿವಿಂಗ್ ತಂಡದವರು ಪಾಲ್ಗ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!