ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ವಿವಿಧ ಯೋಜನೆಗಳ ಹಸ್ತಾಂತರ

ಉಡುಪಿ (ಉಡುಪಿ ಟೈಮ್ಸ್ ವರದಿ): ಲಯನ್ಸ್ ಜಿಲ್ಲೆ 317 ಸಿ ಯ ಹಿರಿಯ ಹಾಗು ಪ್ರತಿಷ್ಠಿತ ಕ್ಲಬ್ ಆದ ಲಯನ್ಸ್ ಕ್ಲಬ್ ಉಡುಪಿ ಇದರ ಗವರ್ನರ್ ಭೇಟಿ ಸಂದರ್ಭದಲ್ಲಿ ವಿವಿಧ ಯೋಜನೆಗಳ ಹಾಗೂ ಶಾಶ್ವತ ಯೋಜನೆಗಳ ಹಸ್ತಾಂತರ ಕಾರ್ಯಕ್ರಮವು ಉಡುಪಿಯಲ್ಲಿ ನಡೆಯಿತು.

ಉಡುಪಿ ಲಯನ್ಸ್ ಕ್ಲಬ್ ನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಗವರ್ನರ್’ ಲಯನ್ಸ್ ಜಿಲ್ಲೆ 317 ಸಿ ಜಿಲ್ಲಾ ಗವರ್ನರ್ ನೇರಿ ಕರ್ನೇಲಿಯೋ ” ಉಡುಪಿ ಲಯನ್ಸ್ ಕ್ಲಬ್ ಅತ್ಯಂತ ಹಳೆ ಕ್ಲಬ್ ಆಗಿದ್ದು ಅನೇಕ ಪ್ರತಿಷ್ಠಿತ ವ್ಯಕ್ತಿಗಳು ಈ ಕ್ಲಬ್ ನ ಅಧ್ಯಕ್ಷರಾಗಿದ್ದರು. ಇದೀಗ ಈ ಕ್ಲಬ್ ನ ವತಿಯಿಂದ ಬುಧವಾರ ಒಂದೇ ದಿನ 5 ಲ.ರೂ.ಗೂ ಅಧಿಕ ಮೊತ್ತದ ಸೇವಾ ಕಾರ್ಯಗಳು ನಡೆಯಿತು, ವಿವಿಧ ಸೇವಾ ಕಾರ್ಯಕ್ರಮ,ಕಣ್ಣಿನ ತಪಾಸಣೆ ಶಿಬಿರ, ಆಹಾರ ಸಾಮಗ್ರಿ ಹಸ್ತಾಂತರ, ಸಂಸ್ಥೆ ಹಾಗೂ ಶಾಲೆಗಳಿಗೆ ವಿವಿಧ ಪರಿಕರಗಳನ್ನು ಹಸ್ತಾಂತರಿಸ ಲಾಗಿದೆ ಎಂದರು.

500 ಕ್ಕೂ ಅಧಿಕ ಹೊಸ ಸದಸ್ಯೆ ನೇಮಕಾತಿ ಸಹಿತ ಹಲವಾರು ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ 48ಕ್ಕೂ ಅಧಿಕ ಶಾಲೆಗಳಲ್ಲಿ ನೇಮಕಾತಿ, ಆತ್ಮಹತ್ಯೆ ತಡೆ, ಮಧುಮೇಹ ಜಾಗೃತಿ, ಕ್ಯಾನ್ಸರ್ ರೋಗದ ಬಗ್ಗೆೆ ಅರಿವು ಸಹಿತ ವಿದ್ಯಾರ್ಥಿ ಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸಂಚಾರ ನಿಯಮಾವಳಿ ಪಾಲಿಸುವ ನಿಟ್ಟಿನಲ್ಲಿ ಈಗಾಗಲೇ ವಿವಿಧೆಡೆ ಎಚ್ಚರಿಕೆ ಫಲಕಗಳನ್ನು ಅಳವಡಿಸಿಕೊಳ್ಳಲಾಗಿದೆ. ಎಲ್‌ಸಿಐಎಫ್ ಫಂಡ್ ಮೂಲಕವೂ ಸೇವಾಚಟುವಟಿಕೆಗಳನ್ನು ನಡೆಸಲಾಗಿದೆ. ಸಂಸ್ಥೆಗೆ ಈಗಾಗಲೇ 63 ವರ್ಷಗಳು ತುಂಬಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಚಟುವಟಿಕೆಗಳು ನಡೆಯಲಿದೆ ಎಂದರು.

ವಲಯಾಧ್ಯಕ್ಷ ಪ್ರಸಾದ್ ವಿ.ಶೆಟ್ಟಿ, ಖಜಾಂಚಿ ದಿವಾನ್ ನಂಬಿಯಾರ್, ಅಧ್ಯಕ್ಷ ರವೀಶ್‌ಚಂದ್ರ ಶೆಟ್ಟಿ, ಕಾರ್ಯದರ್ಶಿ ವಿಜಯ ಕುಮಾರ್ ಮುದ್ರಾಡಿ, ಸಂಘಟನ ಕಾರ್ಯದರ್ಶಿ ರವಿರಾಜ್ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!