ಶಿವಪುರ ಶಂಕರದೇವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ರದ್ದು
ಉಡುಪಿ, ಜ.25: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಕಾನೂನಿನ ವಿರುದ್ಧವಾಗಿ ವ್ಯವಸ್ಥಾಪನಾ ರಚಿಸಿದ ಹಿನ್ನೆಲೆಯಲ್ಲಿ ಶಿವಪುರ ಶಂಕರದೇವ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ರದ್ದುಗೊಳಿಸಿ ರಾಜ್ಯ ಧಾರ್ಮಿಕ ಪರಿಷತ್ತು ಆದೇಶ ಹೊರಡಿಸಿದೆ.
ಅರ್ಚಕರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗುವಂತಿಲ್ಲ. ಆದರೆ ಶಿವಪುರ ಶಂಕರದೇವ ದೇವಸ್ಥಾನದಲ್ಲಿ ಅರ್ಚಕ ಎಂದು ಇಲಾಖೆಗೆ ತಿಳಿಸದೇ ತಪ್ಪುಮಾಹಿತಿಯನ್ನು ನೀಡಿ ಅರ್ಚಕರೇ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿದ್ದರು. ಅಲ್ಲದೆ ಅರ್ಚಕರು ಎಂದು ತಿಳಿಸದೇ ಮತ್ತೆ 3 ಜನ ಅರ್ಚಕರು ಕಾನೂನು ಬಾಹಿರವಾಗಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿದ್ದರು.
ಇದೀಗ ರಾಜ್ಯ ಧಾರ್ಮಿಕ ಪರಿಷತ್, ಶಿವಪುರ ಶಂಕರದೇವ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ರದ್ದುಗೊಳಿಸಿ ಹೆಬ್ರಿಯ ಉಪ ತಹಶೀಲ್ಧಾರ್ ಅವರನ್ನು ಆಡಳಿತಾಧಿಕಾರಿ ನೇಮಿಸಿ ಆದೇಶವನ್ನು ಹೊರಡಿಸಿದೆ.