ಮಲ್ಪೆ: ಫಿಶ್ ಮಿಲ್ ಉದ್ಯೋಗಿ ವಿಷ ಸೇವಿಸಿ ಆತ್ಮಹತ್ಯೆ

ಮಲ್ಪೆ ಜ.24(ಉಡುಪಿ ಟೈಮ್ಸ್ ವರದಿ): ವಿಷ ಸೇವಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಲ್ಪೆಯ ನಿವಾಸಿ ರಮೇಶ (56) ಆತ್ಮಹತ್ಯೆ ಮಾಡಿಕೊಂಡಿರುವರು. ಕಳೆದ 20 ವರ್ಷಗಳಿಂದ ಮಲ್ಪೆಯ ರಾಜ್ ಪಿಶ್ ಮಿಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಕಳೆದ ಒಂದು ತಿಂಗಳಿನಿಂದ ಕೆಲಸಕ್ಕೆ ಹೋಗದೇ ಇದ್ದು, ಇಂದು ಬೆಳಿಗ್ಗೆ ಮನೆಯ ಸಿಟೌಟ್ ಬಳಿ ಅಸ್ವಸ್ಥಗೊಂಡು ಬಿದ್ದುಕೊಂಡಿದ್ದರು. ಇದನ್ನು ಕಂಡು ನೆರೆ ಮನೆಯವರು ರಮೇಶ ಅವರ ಪತ್ನಿ ಆಶಾ ಅವರಿಗೆ ಮಾಹಿತಿ ನೀಡಿದ್ದರು. ಬಳಿಕ ಆಶಾ ಅವರು ಮನೆಗೆ ಬಂದು ನೋಡಿದಾಗ ರಮೇಶ ಅವರು ಮನೆಯಲ್ಲಿ ಇದ್ದ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಈ ಬಗ್ಗೆ ಆಶಾ ಅವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!