ಮೂಡುಬಿದಿರೆ: ಶ್ರೀರಾಮ್ ಫೈನಾನ್ಸ್ ಲಿ. ವಿದ್ಯಾರ್ಥಿ ವೇತನ ವಿತರಣೆ
ಮೂಡುಬಿದಿರೆ: ‘ಧರ್ಮಕ್ಕೆ ಕೊಡುತ್ತಾರೆಂದು ಅರ್ಜಿ ಸಲ್ಲಿಸುವ ಬದಲು ಅದರ ಪ್ರಯೋಜನ ಇನ್ನೊಬ್ಬರಿಗೆ ಆಗಲಿ ಎಂಬ ಮನೋಭಾವ ವಿದ್ಯಾರ್ಥಿಗಳಲ್ಲಿ ಬೇಕು, ವಿದ್ಯಾರ್ಥಿಗಳಿಗೆ ಧರ್ಮಕ್ಕೆ ಆಗಿರಬಹುದು, ಆದರೆ ಕೊಡುವವರು ಕಷ್ಟಪಟ್ಟು ದುಡಿದು ಸಿಕ್ಕಿದ ಲಾಭಾಂಶದ ಫಲ ಎನ್ನುವುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು, ಪ್ರಯೋಜನ ಪಡೆದು ಸದ್ವಿನಿಯೋಗಿಸಿಕೊಳ್ಳುವ ಜೊತೆಗೆ ಕೊಡುಗೆ ಕೊಟ್ಟವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಶ್ರೀರಾಮ್ ಫೈನಾನ್ಸ್ ಲಿ.ಮೂಡುಬಿದಿರೆ ಶಾಖೆ ವತಿಯಿಂದ ಬುಧವಾರ ಬೆಳಿಗ್ಗೆ ಸಮಾಜ ಮಂದಿರದಲ್ಲಿ ನಡೆದ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 11 ವರ್ಷಗಳಿಂದ ವಿದ್ಯಾರ್ಥಿ ನಿಧಿ ವಿತರಿಸುತ್ತಿದ್ದು ಈ ಬಾರಿ ಸುಮಾರು 400 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಿಸಲಾಯಿತು.
ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ,ಶ್ರೀರಾಮ್ ಫೈನಾನ್ಸ್ ಝೋನಲ್ ಕಲೆಕ್ಷನ್ ಹೆಡ್ ನಾಗರಾಜ್ ಬಿ,ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಪ್ರವೀಣ್ ಚಂದ್ರ ಜೈನ್, ವೇಣೂರು ಸರಕಾರಿ ಪ್ರೌಢಶಾಲಾ ಅಧ್ಯಾಪಕರಾದ ರವೀಂದ್ರ ಕೆ, ಝೋನಲ್ ಪ್ರಾಡಕ್ಟ್ ಹೆಡ್ ಚಂದ್ರಹಾಸ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಕ್ಲಸ್ಟರ್ ಹೆಡ್ ಸದಾಶಿವ ಅಮೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಪತಿ ನಾಯ್ಕ್ ವಂದಿಸಿದರು. ಶ್ರೀರಾಜ್ ಸನಿಲ್ ಕಾರ್ಯಕ್ರಮ ನಿರೂಪಿಸಿದರು.
ಸುರೇಶ್ ಎಸ್, ಸುಕೇಶ್ ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.