ಬಸ್, ಕೊಠಡಿ, ನೀರಿನ ಸಮಸ್ಯೆ, ಕುಡುಕರ ಹಾವಳಿ: ಉಡುಪಿ ಡಿಸಿ, ಎಸ್ಪಿಗೆ ದೂರು ನೀಡಿದ ವಿದ್ಯಾರ್ಥಿಗಳು

ಕುಂದಾಪುರ: ‘ಶಾಲೆಗೆ ಹೋಗಲು ಸರಿಯಾಗಿ ಬಸ್ ಇಲ್ಲ, ಸರಿಯಾದ ರಸ್ತೆ ಸರಿಯಿಲ್ಲ, ಸರಕಾರಿ ಬಸ್ ಬರುವುದಿಲ್ಲ, ಆಟೋಗೆ ಹಣ ಕೊಡಲು ಮನೆಯವರಿಂದ ಆಗಲ್ಲ, ಶಾಲೆ ಆವರಣದಲ್ಲಿ ಕುಡುಕರ ಕಾಟ ಎಂದು ದೂರಿದ ವಿದ್ಯಾರ್ಥಿಗಳು.

ಇದು ಕೆರಾಡಿ ಗ್ರಾಪಂ, ಉಡುಪಿ ಜಿ.ಪಂ., ಕುಂದಾಪುರ ತಾ.ಪಂ. ಹಾಗೂ ಸಿಡಬ್ಲ್ಯೂಸಿ ಸ್ವಯಂ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಕೆರಾಡಿ ಗ್ರಾಪಂ ವಠಾರದಲ್ಲಿ ಬುಧವಾರ ಆಯೋಜಿಸಲಾದ ಮಕ್ಕಳ ವಿಶೇಷ ಗ್ರಾಮ ಸಭೆ ’ಮಕ್ಕಳ ಹಬ್ಬ’ದಲ್ಲಿ ಮಕ್ಕಳು ತಮ್ಮ ಆರೂರು ಗ್ರಾಮದ ವಿವಿಧ ಅಹವಾಲುಗಳನ್ನು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಎಸ್ಪಿ ಡಾ.ಅರುಣ್ ಕೆ., ಜಿಪಂ ಸಿಇಓ ಪ್ರಸನ್ನ ಎಚ್. ಎದುರು ತೋಡಿಕೊಂಡರು.

ಮಕ್ಕಳ ಒಂದೊಂದು ಮಾಹಿತಿ, ಸಮಸ್ಯೆ ನೆರೆದಿದ್ದ ಜಿಲ್ಲಾಮಟ್ಟದ ಅಧಿಕಾರಿಗಳು ಆಲಿಸಿದರು. ಕೆರಾಡಿ ಗ್ರಾ.ಪಂ ವ್ಯಾಪ್ತಿಯ 18 ವರ್ಷದ ಒಳಗಿನ ವಯಸ್ಸಿನ ವಿದ್ಯಾರ್ಥಿಗಳು ಈ ಸಭೆಯಲ್ಲಿ ಭಾಗವಹಿಸಿದ್ದು ಪೋಷಕರು ಸಹಿತ 500ಕ್ಕೂ ಅಧಿಕ ಮಂದಿ ಹಾಜರಿದ್ದರು.

ಸಮಸ್ಯೆ ಹೇಳಿದ ಮಕ್ಕಳು: ಗ್ರಾಪಂ ವ್ಯಾಪ್ತಿಯ ಹತ್ತು ಹಲವು ಸಮಸ್ಯೆಗಳನ್ನು ವಿವಿಧ ರೀತಿಯಲ್ಲಿ ಮಕ್ಕಳು ಅಧಿಕಾರಿಗಳೆ ದುರು ಹಂಚಿಕೊಂಡರು. ಮೊದಲಿಗೆ ಒಂದಿಷ್ಟು ಶಾಲೆ ವಿದ್ಯಾರ್ಥಿಗಳು ತಾವು ಮೊದಲೇ ತಯಾರಿಸಿದ ನಕಾಶೆಯನ್ನು ತೋರಿಸುವ ಮೂಲಕ ಊರಿನ ಸಮಸ್ಯೆಗಳನ್ನು ಇಂಚಿಂಚಾಗಿ ತಿಳಿಸಿದರು.

ಅಂಚೆ ಪೆಟ್ಟಿಗೆ, ದನಿ ಪೆಟ್ಟಿಗೆ ಮೂಲಕ ಊರಿನ ಹಲವು ಸಮಸ್ಯೆಗಳ ಬಗ್ಗೆ ಗೋಣಿ ಚೀಲದಲ್ಲಿ ಸಂಗ್ರಹಿಸಿ ತಂದ ಹಲವು ವಿಚಾರಗಳು ಅಧಿಕಾರಿಗಳ ಗಮನಕ್ಕೆ ಬಂದಿತು. ಹೌದರಾಯನ ವಾಲ್ಗುವೆ ಮೂಲಕ ಶಾಲೆ, ರಸ್ತೆ, ಟವರ್ ಸಮಸ್ಯೆ, ಸೇತುವೆ, ಶಾಲಾ ಕಟ್ಟಡ ಸಮಸ್ಯೆಯನ್ನು ತೋಡಿಕೊಳ್ಳಲಾಯಿತು. ದೈವ ದರ್ಶನದ ರೂಪಕದಿಂದ ಪ್ಲಾಸ್ಟಿಕ್ ಕವರ್, ಬಾಟಲ್ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಯಿತು. ಮಕ್ಕಳ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ಸಮಸ್ಯೆಗಳ ಸರಮಾಲೆ: ಬಿರುಕು ಬಿದ್ದ ಶಾಲೆ ಗೋಡೆಗಳು, ಕಾಂಪೌಂಡ್ ಗೋಡೆ ಇಲ್ಲದಿರುವುದು, ಅಡುಗೆ ಕೋಣೆ ಅಗ ತ್ಯತೆ, ಕುಡಿಯುವ ನೀರು, ರಸ್ತೆ, ಕಾಲು ಸಂಕ ರಚನೆಯಾಗಬೇಕು, ಶಾಲಾವರಣ ದೊಳಗೆ ರಾತ್ರಿ ಹೊತ್ತು ಅನೈತಿಕ ಚಟು ವಟಿಕೆಗಳು ನಡೆಯುವುದರ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಯಿತು.

ಕಲಾತ್ಮಕ ಚಿನ್ನಾಭರಣಗಳ ಪ್ರದರ್ಶನ-ಮಾರಾಟ
ತಮ್ಮೂರಲ್ಲಿನ ತ್ಯಾಜ್ಯ-ಪ್ಲಾಸ್ಟಿಕ್ ಸಮಸ್ಯೆ, ಬೀದಿ ದೀಪ, ಕಾಡು ಪ್ರಾಣಿಗಳ ಸಮಸ್ಯೆಯಿಂದ ಬೆಳೆ ಹಾನಿಗೆ ಪರಿಹಾರ, ಗ್ರಾ.ಪಂ ವ್ಯಾಪ್ತಿಯಲ್ಲಿ ಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದು, ಮದ್ಯಪಾನಿಗಳಿಂದ ಶಾಲೆ ವಾತಾವರಣ ಹಾನಿ, ಅಗತ್ಯ ಪರಿಸರದಲ್ಲಿ ಸಿಸಿಟಿವಿ ಅಳವಡಿಕೆ, ಒಂದಷ್ಟು ಕಡೆ ಕಾಡುಪ್ರಾಣಿಗಳ ಭಯದ ಕುರಿತು ಮಕ್ಕಳು ಅವಲತ್ತುಕೊಂಡರು. ಆಸ್ಪತ್ರೆ, ಅಂಬುಲೆನ್ಸ್ ವಿಚಾರದ ಬಗ್ಗೆ ಮಕ್ಕಳು ಪ್ರಸ್ತಾಪಿಸಿದರು.

ಮಕ್ಕಳ ಹಬ್ಬದಲ್ಲಿ ಕಿರು ಪ್ರಹಸನ, ಚರ್ಚೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇಡೀ ದಿನದ ಮಕ್ಕಳ ಹಬ್ಬ ಇದಾಗಿದ್ದು, ಮಕ್ಕಳು ಹಾಗೂ ನೆರೆದವರಿಗೆ ಹಗ್ಗಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಿ ಪ್ರೊತ್ಸಾಹ ಬಹುಮಾನ ನೀಡಲಾಯಿತು.

ಮಕ್ಕಳ ಹಬ್ಬಕ್ಕೆ ಚಾಲನೆ: ಮಕ್ಕಳ ಹಬ್ಬಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಸನ್ನ ಎಚ್. ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿ ದರು. ಕೆರಾಡಿ ಗ್ರಾಪಂ ಅಧ್ಯಕ್ಷ ಸುದರ್ಶನ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷೆ ಕುಸುಮಾ ಪೂಜಾರಿ, ಸ್ಥಾಯಿ ಸಮಿತಿಯ ಲಕ್ಷ್ಮಿ, ಸದಸ್ಯರು, ಡಿಡಿಪಿಐ ಮಾರುತಿ, ಬೈಂದೂರು ಬಿಇಒ ನಾಗೇಶ್ ನಾಯ್ಕ್, ಶಿಕ್ಷಣ ಫೌಂಡೇಶನ್‌ನ ವೀಣಾ ಹೆಗ್ಡೆ, ವಂಡ್ಸೆ ವೈದ್ಯಾಧಿಕಾರಿ ಡಾ.ರಾಮ್, ಪಂಚಾಯತ್‌ರಾಜ್ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ವಂಡ್ಸೆ, ಮಕ್ಕಳ ಮಿತ್ರ ಭಾಸ್ಕರ ಬೆಳ್ಳಾಲ, ಗ್ರಾಪಂ ನೋಡಲ್ ಅಧಿಕಾರಿ ಪರಶುರಾಮ ಉಪಸ್ಥಿತರಿದ್ದರು.

ಸಿಡಬ್ಲ್ಯೂಸಿಯ ಶ್ರೀನಿವಾಸ ಗಾಣಿಗ ಪ್ರಸ್ತಾವಿಕವಾಗಿ ಮಾತನಾಡಿದರು. ಪಿಡಿಒ ನಾರಾಯಣ ಬನಶಂಕರಿ ವರದಿ ಮಂಡಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ರಾಘವೇಂದ್ರ ಕೊಠಾರಿ, ನಾರಾಯಣ ಕೊಠಾರಿ ಕಾರ್ಯಕ್ರಮ ನಿರೂಪಿಸಿದರು.

‘ಮಕ್ಕಳ ಗ್ರಾಮಸಭೆ ವಿನೂತನ ರೀತಿಯಲ್ಲಿ ನಡೆದಿದೆ. ಮಕ್ಕಳು ಹೇಳಿದ ಸಮಸ್ಯೆ ವಾಸ್ತಾವಿಕವಾಗಿದ್ದು ಹಂತಹಂತವಾಗಿ ಇದನ್ನು ನಿವಾರಿಸುವ ಕೆಲಸ ಮಾಡಲಾಗುತ್ತದೆ. ತುರ್ತು ನಿವಾರಣೆಗೆ ಆದ್ಯತೆ ಮೇರೆಗೆ ಕ್ರಮವಹಿಸಲು ಸಂಬಂದಪಟ್ಟ ಅಧಿಕಾರಿಗಳಿಗೂ ಸೂಚನೆ ನೀಡಲಾಗುವುದು. ಸಾರ್ವಜನಿಕರ ಆಸ್ತಿ ಸಂರಕ್ಷಣೆ ಬಗ್ಗೆ ಮಕ್ಕಳು ಹೇಳಿರುವುದು ನಾಗರಿಕರಿಗೆ ಪಾಠವಾಗಬೇಕಿದೆ. ನಮ್ಮೂರಿನ ಶಾಲೆಗಳು ದೇವಾಲಯಕ್ಕೆ ಸಮ. ಅದನ್ನೂ ಪವಿತ್ರವಾಗಿಡುವುದು ಊರವರ ಕರ್ತವ್ಯ.

ಡಾ.ಕೆ.ವಿದ್ಯಾ ಕುಮಾರಿ, ಉಡುಪಿ ಜಿಲ್ಲಾಧಿಕಾರಿ

‘ಶಾಲಾ ಆವರಣಗಳಲ್ಲಿ ಕುಡುಕರಿಂದ ದುರ್ವರ್ತನೆ, ಪರಿಸರ ಹಾಳುಗೆಡುವ ಬಗ್ಗೆ ಸಭೆಯಲ್ಲಿ ಮಕ್ಕಳು ಪ್ರಸ್ತಾಪಿಸಿದ್ದು, ಇಲಾಖೆಯಿಂದ ಅಗತ್ಯ ಕ್ರಮಕೈಗೊಂಡು ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಲಾಗುವುದು.

-ಡಾ.ಅರುಣ್ ಕೆ, ಉಡುಪಿ ಎಸ್ಪಿ

ʼಗ್ರಾಮ ಸಭೆಯಲ್ಲಿ ರಸ್ತೆ ಸರಿಯಿಲ್ಲ, ಶುದ್ಧ ಕುಡಿಯುವ ನೀರಿನ ಸಮಸ್ಯೆ, ಕಾಲು ಸಂಕ ರಚನೆ, ಶಾಲಾ ಪರಿಸರದಲ್ಲಿ ಕುಡುಕರ ಹಾವಳಿಯನ್ನು ಪ್ರಸ್ತಾಪಿಸ ಲಾಗಿದೆ. ಶೀಘ್ರ ಸಮಸ್ಯೆ ಪರಿಹಾರವಾಗಬೇಕು. ಪ್ಲಾಸ್ಟಿಕ್ ಸಮಸ್ಯೆ ಬಗ್ಗೆ ಗ್ರಾಮಸ್ಥರಿಗೆ ಅರಿವು ನೀಡುವ ಕೆಲಸವೂ ಆಗಬೇಕುʼ.

ಶ್ರೇಯಸ್, ವಿದ್ಯಾರ್ಥಿ

ʼಸರಕಾರದ ಮಟ್ಟದಲ್ಲಿ ಚರ್ಚೆಯಾಗುವ ಸಲುವಾಗಿ ಗ್ರಾ.ಪಂ.ನಲ್ಲಿ ಗ್ರಾಮಸಭೆ ಮಕ್ಕಳ ಹಬ್ಬವಾಗಬೇಕೆಂಬ ನಿಟ್ಟಿನಲ್ಲಿ ಗಮನ ಸೆಳೆಯಲಾಗಿತ್ತು. ಕೆರಾಡಿಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಅಧಿಕಾರಿಗಳ ಮುಂದೆ ಮಕ್ಕಳು ತಮ್ಮ ನಿತ್ಯದ ಜ್ವಲಂತ ಸಮಸ್ಯೆ ಹೇಳಿಕೊಂಡಿದ್ದಾರೆ. ಅಧಿಕಾರಿಗಳು ಪೂರಕವಾಗಿ ಸ್ಪಂದಿಸುವ ನಿರೀಕ್ಷೆಯಿದೆʼ.

ಶ್ರೀನಿವಾಸ ಗಾಣಿಗ, ಸಂಯೋಜಕರು, ನಮ್ಮಭೂಮಿ ಸಿಡಬ್ಲ್ಯೂಸಿ ಸಂಸ್ಥೆ

Leave a Reply

Your email address will not be published. Required fields are marked *

error: Content is protected !!