ಶ್ರೀಕ್ಷೇತ್ರ ಪೆರ್ಣಂಕಿಲ- ಸಭಾಗೃಹ ಮತ್ತು ಭೋಜನ ಶಾಲೆಯ ಶಿಲಾನ್ಯಾಸ
ಉಡುಪಿ: ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಪೆರ್ಣಂಕಿಲ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ನೂತನ ಸಭಾಗೃಹ ಮತ್ತು ಭೋಜನಶಾಲೆಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದರು.
ವಿದ್ವಾನ್ ಮಧುಸೂಧನ ತಂತ್ರಿಗಳು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮುಂಬೈಯ ಖ್ಯಾತ ವಕೀಲ ಬಿ.ಎನ್. ಪೂಜಾರಿ ಕಾಂತನಮಜಲು ಕಣಂಜಾರು, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉದ್ಯಮಿ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಬೆಂಗಳೂರಿನ ಉದ್ಯಮಿ ಭಾರ್ಗವ ರೆಡ್ಡಿ, ಮಾಲೂರಿನ ಉದ್ಯಮಿ ವಿಜಯ ಕುಮಾರ್ ಹೂಡಿ, ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿಕ್ರಮ್ ಹೆಗ್ಡೆ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್ ನೂತನ ಸಭಾಗೃಹ ಮತ್ತು ಭೋಜನಶಾಲೆಗಳ ಬಗ್ಗೆ ಮಾಹಿತಿ ನೀಡಿ, ಸುಮಾರು 5 ಕೋಟಿ ರು.ಗಳಿಗೆ ಭಕ್ತಾಭಿಮಾನಿಗಳು ಸಹಕರಿಸುವಂತೆ ವಿನಂತಿಸಿದರು.
ಪ್ರಧಾನ ಕಾರ್ಯದರ್ಶಿ ಪೆರ್ಣಂಕಿಲ ಶ್ರೀಶ ನಾಯಕ್ ಶ್ರೀಪಾದರಿಗೆ ಗುರುವಂದನೆ ಸಲ್ಲಿಸಿದರು. ಮಠದ ದೀವಾನರಾದ ರಘುರಾಮ ಆಚಾರ್ಯ, ಕಾರ್ಯನಿರ್ವಣಾಧಿಕಾರಿಗಳಾದ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಉಮೇಶ್ ನಾಯಕ್ ಪೆರ್ಣಂಕಿಲ ಕಾರ್ಯಕ್ರಮ ನಿರೂಪಿಸಿದರು.