ಬಿಜೆಪಿ ಜಿಲ್ಲಾಧ್ಯಕ್ಷರು ತಲೆ ಬೋಳಿಸುವ ತಮ್ಮ ವಾಗ್ದಾನ ಉಳಿಸಿಕೊಳ್ಳುವ ಬದ್ಧತೆ ತೋರಿಸಲಿ- ಕೊಡವೂರು

ಉಡುಪಿ: ಕಾಂಗ್ರೆಸ್ ಪಕ್ಷ ಚುನಾವಣಾ ಸಮಯದಲ್ಲಿ ರಾಜ್ಯದ ಬಡವರಿಗೆ ಗ್ಯಾರಂಟಿ ಸ್ಕೀಮ್ ಗಳನ್ನು ಘೋಷಿಸಿದಾಗ ಉಡುಪಿ ಬಿಜೆಪಿ  ಜಿಲ್ಲಾಧ್ಯಕ್ಷರಾದ ಕೂಯಿಲಾಡಿ  ಸುರೇಶ್ ನಾಯಕ್ ರವರು ಈ  ಯೋಜನೆಗಳು ಅನುಷ್ಠಾನಗೊಂಡಲ್ಲಿ ತಾನು ಬೆಂಗಳೂರು ಕೆಪಿಸಿಸಿ ಕಚೇರಿಯ ಎದುರು ತಲೆ ಬೋಳಿಸಿ ಕುಳಿತುಕೊಳ್ಳುವೆನೆಂಬ ತನ್ನ ವಾಗ್ದಾನವನ್ನು ಉಳಿಸಿಕೊಳ್ಳುವಲ್ಲಿ ಭದ್ದತೆ  ತೋರಿಸಲಿ ಎಂದು  ಉಡುಪಿ  ಜಿಲ್ಲಾ ಅಧ್ಯಕ್ಷರಾದ ಅಶೋಕ್  ಕುಮಾರ್  ಕೊಡವೂರು ಹೇಳಿದರು.

ಸುರೇಶ್ ನಾಯಕ್ ಅವರಿಗೆ ಸ್ವಾಭಿಮಾನವಿದ್ದರೆ ತಲೆಬೋಳಿಸಿ ಆದಷ್ಟು ಶೀಘ್ರ ತಮ್ಮ ಹೇಳಿಕೆಯಂತೆ ನಡೆದುಕೊಳ್ಳಲಿ,ಪಕ್ಷದ ಗೌರವವಿತ ಸ್ಥಾನದಲ್ಲಿರುವ ತಾವು  ಪ್ರಚಾರಗೋಸ್ಕರ ಬಾಲಿಶ ಹೇಳಿಕೆಗಳನ್ನು ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರವರ್ತಿಯನ್ನು ಕೊನೆಗಾಣಿಸಬೇಕು, ಯೋಜನೆ ಅನುಷ್ಠಾನಗೊಂಡಲ್ಲಿ ತಲೆ ಬೋಳಿಸುವೆನೆಂದು ಹೇಳಿಕೆ ನೀಡಿದ ಸುರೇಶ್ ನಾಯಕ್ ಅವರು ಕಾಂಗ್ರೆಸ್ ಬಡವರಿಗಾಗಿ ಅನುಷ್ಠಾನಗೊಳಿಸಿದ ಯೋಜನೆಗಳ ಸೌಲಭ್ಯಗಳನ್ನು ತಾನು ಸ್ವೀಕರಿಸುವುದಿಲ್ಲ ಎಂದು ಘೋಷಿಸುವ ಉದಾರತೆಯನ್ನು ಪ್ರದರ್ಶಿಸದೆ  ಇರುವುದು ಅವರ ಸಂಕುಚಿತ ಮನೋಭಾವನೆಯನ್ನು  ತೋರಿಸುತ್ತದೆ. ಚುನಾವಣಾ ಸಮಯದಲ್ಲಿ ಗ್ಯಾರೆಂಟಿ ಬಗ್ಗೆ ಆವಹೆಳನಕಾರಿ ಮಾತುಗಳನ್ನಾಡುವುದು  ಬೋಗಸ್ ಎಂದು ಬಾಯಿಗೆ ಬಂದಂತೆ ಅಪಪ್ರಚಾರ ನಡೆಸುವುದು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಗುಟ್ಟಾಗಿ ಕಾಂಗ್ರೆಸ್ ಯೋಜನೆಗಳ ಲಾಭವನ್ನು ಪಡೆಯುವುದು ಬಿಜೆಪಿಯ ಅಜೆಂಡವಾಗಿದೆ. ಜನರ ತೆರಿಗೆ ಹಣದಿಂದಲೇ ಜನರಿಗೆ ಸವಲತ್ತುಗಳನ್ನು ನೀಡುವುದರಿಂದ ಉಚಿತ ಕೊಡುಗೆಗಳನ್ನು ಕೊಟ್ಟರೆ ನಮ್ಮ ದೇಶ ಅಥವಾ ರಾಜ್ಯ ಆರ್ಥಿಕ ಮುಗ್ಗಟ್ಟಿ  ಎದುರಿಸಬಹುದು ಎನ್ನುವ ಬಿಜೆಪಿ ಮುಖಂಡರಿಗೆ  ತಮ್ಮ ಸರಕಾರ 40% ಕಮಿಷನ್ ಹೊಡೆದಾಗ ಕರ್ನಾಟಕ ದಿವಾಳಿ ಆಯಿತು ಎಂದು  ಅನಿಸಲಿಲ್ಲವೇ.

ಲಕ್ಷಾಂತರ ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಗಳನ್ನು ತಮ್ಮ ಹಿಂಬಾಲಕರಿಗೆ ಮೂರು ಕಾಸಿಗೆ ಮಾರಾಟ ಮಾಡಿದಾಗ ದಿವಾಳಿ ಆಯಿತು ಅನ್ನಿಸಿಲ್ಲವೇ ˌಗುಜರಾತ್ ಉದ್ದಿಮೆದಾರರ 20 ಲಕ್ಷ ಕೋಟಿ ಬ್ಯಾಂಕ್ ಸಾಲವನ್ನು ಮನ್ನಾ ಮಾಡಿದಾಗಲೂ ದಿವಾಳಿ ಆಯ್ತು ಎನ್ನಿಸಲಿಲ್ಲವೇ. ಆದರೆ ರಾಜ್ಯದ ಬಡವರಿಗೆ ಯೋಜನೆಗಳನ್ನು ಘೋಷಿಸಿದಾಗ ರಾಜ್ಯ ದಿವಾಳಿ ಆಗುತ್ತಿದೆ ಎಂದು ಬೊಬ್ಬಿಡುವುದು ವಿಪರ್ಯಾಸ. ಸರಕಾರ ಅಧಿಕಾರಕ್ಕೆ ಬಂದು ಯೋಜನೆಗಳಿಗೆ  ತಗಲುವ ವೆಚ್ಚದ ಬಗ್ಗೆ ಪರಿಶೀಲಿಸಿ ಅದನ್ನು ಅನುಷ್ಠಾನಗೊಳಿಸಲು ಸಮಯದ ಅವಕಾಶಬೇಡವೇ. ತರಾತೂರಿಯಲ್ಲಿ ಅನುಷ್ಠಾನಗೊಳಿಸಬೇಕೆಂದು ಬೊಬ್ಬಿಡುವ ಬಿಜೆಪಿ ಮುಖಂಡರು ತಮ್ಮದೇ ಪಕ್ಷವು ನೀಡಿರುವ ಆಶ್ವಾಸನೆಗಳಾದ ಪ್ರತಿಯೊಬ್ಬನ ಖಾತೆಗೆ  ರೂ 15 ಲಕ್ಷ  ಜಮಾಮಾಡುವುದು ˌವರ್ಷಕ್ಕೆ  2  ಕೋಟಿ ಉದ್ಯೋಗ ಸೃಷ್ಠಿಸುವ ಆಶ್ವಾಸನೆಗಳನ್ನು   ಕಾರ್ಯಗತಗೊಳಿಸಲು ಒತ್ತಡ ಹೇರಲು ಧೈರ್ಯವನ್ನು ತೋರದಿರುವುದು ನಿಮ್ಮಪಕ್ಷದ ದುರ್ಬಲ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಉಡುಪಿ ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡುವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!