ಪಾವತಿಸಿ, ಪರಿಷ್ಕರಿಸಿ, ಹೈನುಗಾರಿಕೆ ಉಳಿಸಿ- ರವಿರಾಜ ಹೆಗ್ಡೆ

ಉಡುಪಿ: ಹೈನುಗಾರಿಕೆಯಿಂದ ಬದುಕು ಕಟ್ಟಿಕೊಳ್ಳುತ್ತಿರುವ ಹೈನುಗಾರರ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಳೆದ ಆರು ತಿಂಗಳಿಂದ ಸರಕಾರದ ಪ್ರೋತ್ಸಾಹ ಧನ ಬಾರದೇ ಇರುವುದರಿಂದ ಹೈನುಗಾರರು ಪ್ರೋತ್ಸಾಹ ಧನದ ನಿರೀಕ್ಷೆಯಲ್ಲಿದ್ದಾರೆ. 

ಈ ವರ್ಷದ ಗರಿಷ್ಠ ತಾಪಮಾನ, ಬೆಲೆ ಏರಿಕೆ, ಚಿತ್ರ ವಿಚಿತ್ರವಾದ ರೋಗ ರುಜಿನಗಳಿಂದ ಹೈನುಗಾರಿಕೆ ನಲುಗಿ ಹೋಗಿದೆ.  ಕ್ಲಪ್ತ ಸಮಯದಲ್ಲಿ ಪ್ರೋತ್ಸಾಹ ಧನ ಪಾವತಿಯದಲ್ಲಿ, ಹಾಲಿನ ದರ ಪರಿಷ್ಕರಣೆಗೊಂಡಲ್ಲಿ ಹೈನುಗಾರಿಕೆಯಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಾಣಬಹುದಾಗಿದೆ. 

ಹೈನುಗಾರಿಕೆಯಿಂದ ವಿಮುಖರಾದ ರೈತರಲ್ಲೂ ಹೊಸ ಚೈತನ್ಯ ತುಂಬ ಬೇಕಾದರೆ ಸರಕಾರ ಹೈನುಗಾರರಿಗೆ ನೀಡಿದ ಆಶ್ವಾಸನೆಯಂತೆ ಪ್ರೋತ್ಸಾಹ ಧನವನ್ನು ಲೀಟರ್ ಒಂದರ ರೂ.5 ರಿಂದ 7 ಕ್ಕೆ ಹೆಚ್ಚಿಸಬೇಕು.  ಕಳೆದ ಆರು ತಿಂಗಳಿನಿಂದ ಬಾಕಿಯಾದ ಪ್ರೋತ್ಸಾಹ ಧನವನ್ನು ಏಕ ಗಂಟಿನಲ್ಲಿ ಪಾವತಿಸಬೇಕು. 

ಹಾಲಿನ ಧಾರಣೆಯನ್ನು ತತ್ ಕ್ಷಣದಿಂದ ಪರಿಷ್ಕರಿಸ ಬೇಕೆಂದು ದ.ಕ ಹಾಲು ಉತ್ಪಾದಕರ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಕೊಡವೂರು ರವಿರಾಜ ಹೆಗಡೆ ಸರಕಾರವನ್ನು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!