ಉಡುಪಿ: ಡೆಬಿಟ್ ಕಾರ್ಡ್ ನವೀಕರಣ- ಮಹಿಳೆಗೆ ಲಕ್ಷ ರೂ. ವಂಚನೆ

ಉಡುಪಿ ಮಾ.30(ಉಡುಪಿ ಟೈಮ್ಸ್ ವರದಿ): ಡೆಬಿಟ್ ಕಾರ್ಡ್ ನವೀಕರಣದ ನೆಪದಲ್ಲಿ ಮಹಿಳೆಯೊಬ್ಬರ ಖಾತೆಯಿಂದ ಆನ್ಲೈನ್ ಮೂಲಕ 1.04 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರತಿಭಾ ಎಸ್. ಹೆಗ್ಡೆ ಅವರಿಗೆ ಮಾ.29 ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಡೆಬಿಟ್ ಕಾರ್ಟ್ ಬ್ಲಾಕ್ ಆಗಿದೆ ಈ ಕೂಡಲೇ ರಿನಿವಲ್ ಮಾಡುವಂತೆ ತಿಳಿಸಿ, ಕಾರ್ಡ್ ನಂಬ್ರ ಹಾಗೂ OTP ಯನ್ನು ಪಡೆದು, ಅವರ ಬ್ಯಾಂಕ್  ಖಾತೆಯಿಂದ ಹಂತ ಹಂತವಾಗಿ ಒಟ್ಟು 1,04,500 ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ಪ್ರತಿಭಾ ಎಸ್. ಹೆಗ್ಡೆ ಅವರ ಪತಿ ಸದಾಶಿವ ಹೆಗ್ಡೆ ಅವರು ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!