ಎಸಿ ಮೆಷಿನ್ ಫಿಟ್ ಮಾಡುತ್ತಿದ್ದ ವೇಳೆ 9ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು

ಮಂಗಳೂರು, ಮಾ.30: ನಗರದ ನಂತೂರಿನಲ್ಲಿ ಎಸಿ ಮೆಷಿನ್ ಫಿಟ್ ಮಾಡುತ್ತಿದ್ದ ವೇಳೆ ಕಟ್ಟಡದ 9ನೇ ಮಹಡಿಯಿಂದ ಆಯತಪ್ಪಿ ಬಿದ್ದು ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ಸಂಜೆ ನಡೆದಿದೆ.

ಬಂಟ್ವಾಳ ತಾಲೂಕಿನ ಮಣಿಹಳ್ಳಿ ನಿವಾಸಿ ವಿನಯ್ ತಾವ್ರೊ (23) ಮೃತ ಯುವಕ.ಇವರು ನಂತೂರಿನ ರೆಫ್ರಿಜರೇಟರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ್ದ ವಿನಯ್, ನಿನ್ನೆ ಇಲ್ಲಿನ ಅಪಾರ್ಟೆಂಟ್ ನಲ್ಲಿ ಎಸಿ ಮೆಷಿನ್ ಫಿಟ್ ಮಾಡಲು ತೆರಳಿದ್ದರು.

ಈ ವೇಳೆ ಒಂಬತ್ತನೇ ಮಹಡಿಯ ಮನೆಯ ಆವರಣ ಗೋಡೆಯ ಹೊರಭಾಗದಲ್ಲಿ ವಿನಯ್ ಮತ್ತು ಇನ್ನೊಬ್ಬ ಯುವಕ ಮೆಷಿನ್ ಫಿಟ್ ಮಾಡುತ್ತಿದ್ದ ವೇಳೆ, ವಿನಯ್, ಆಯತಪ್ಪಿ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಪರಿಣಾಮ ತಲೆ ಒಡೆದು ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಕದ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!