ಸೌದಿ ಅರೇಬಿಯಾದಲ್ಲಿ 4.1 ತೀವ್ರತೆಯ ಭೂಕಂಪ

ರಿಯಾದ್: ಸೌದಿ ಅರೇಬಿಯಾದ ಆಗ್ನೆಯ ಭಾಗದಲ್ಲಿ ಭೂಮಿಯ 16 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ದಾಖಲಿಸಿದ್ದಾಗಿ ಸೌದಿ ಭೂವಿಜ್ಞಾನ ಸಮೀಕ್ಷೆಯ (SGS) ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ನೆಟ್‌ವರ್ಕ್ ತಿಳಿಸಿದೆ ಎಂದು ಅಲ್ಲಿನ ಮಾಧ್ಯಮ ವರದಿ ತಿಳಿಸಿದೆ.

ಇಂದು ಬೆಳಗ್ಗೆ 7:55 ಗಂಟೆಗೆ ಭೂಕಂಪನದ ಕುರಿತು ಮಾನಿಟರ್ ನಡೆಸಲಾಯಿತು ಎಂದು ಎಸ್‌ಜಿಎಸ್ ತಿಳಿಸಿದೆ.

ಸೌದಿ ಭೂವೈಜ್ಞಾನಿಕ ಸಮೀಕ್ಷೆಯ ಅಧಿಕೃತ ವಕ್ತಾರ ತಾರಿಕ್ ಅಬಾ ಅಲ್-ಖೈಲ್ ಅವರು ಒಮಾನ್ ಸುಲ್ತಾನೇಟ್‌ನ ಪೂರ್ವ ಭಾಗದಲ್ಲಿ ಸೌದಿ ಗಡಿಯಿಂದ ಸುಮಾರು 240 ಕಿ.ಮೀ ದೂರದಲ್ಲಿ ಭೂಕಂಪನ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಭೂಕಂಪನದಿಂದ ಸೌದಿ ಅರೇಬಿಯಾದ ಭೂಮಿಯಲ್ಲಿ ಯಾವುದೇ ಪರಿಣಾಮ ಅಥವಾ ಅಪಾಯ ಉಂಟಾಗಿಲ್ಲ. ಭೂಕಂಪನ ನಡೆದ ಸ್ಥಳ ಜನನಿವಾಸ ಪ್ರದೇಶದಿಂದ ತುಂಬಾ ದೂರವಿದೆ ಎಂದು ಅಬಾ ಅಲ್-ಬೈಲ್ ಭೂಕಂಪನ ತೀವ್ರತೆಯ ಫಲಿತಾಂಶಗಳ ಆಧಾರದ ಮೇಲೆ ಮಾಹಿತಿ ನೀಡಿದರು. SGS ಭೂಕಂಪನಗಳನ್ನು ನಿಗಾವಿರಿಸಿ ಮೇಲ್ವಿಚಾರಣೆ ಮಾಡುತ್ತಿದೆ. ಅವುಗಳನ್ನು ವಿಶ್ಲೇಷಿಸಲು ಮತ್ತು ಭೂಕಂಪನ ಚಟುವಟಿಕೆಯ ಮೂಲಗಳು ಮತ್ತು ವ್ಯಾಪ್ತಿಯನ್ನು ನಿರ್ಧರಿಸಲು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!