ಅಮೃತ ಕಾಲವನ್ನು ಕರ್ತವ್ಯದ ಕಾಲವನ್ನಾಗಿಸುವ ಬಜೆಟ್- ಶ್ರೀಶ ನಾಯಕ್

ಉಡುಪಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅತ್ಯುತ್ತಮ ಪ್ರಗತಿಪರ ಬಜೆಟ್ ಮಂಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಕಾಲ – ಕರ್ತವ್ಯದ ಕಾಲ ಎಂಬ ಕರೆಯನ್ನು ಈ ಬಜೆಟ್ ಮೂಲಕ ಜಾರಿಗೊಳಿಸಿದ್ದಾರೆ.

ಬೊಮ್ಮಾಯಿ ಅವರು ಕಳೆದ ವರ್ಷದ ಬಜೆಟ್ ಮೂಲಕ ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಶೇ 7.9, ತಲಾದಾಯ 2.40 ಲಕ್ಷದಿಂದ 3.32 ಲಕ್ಷ ರೂ., ಜಿಎಸ್ ಟಿ ಸಂಗ್ರಹದಲ್ಲಿ ಶೇ 26, ರಾಜ್ಯ ತೆರಿಗೆಯಲ್ಲಿ ಶೇ 21 ಮತ್ತು ಕೇಂದ್ರ ತೆರಿಗೆಯ ಪಾಲು ಶೇ 25ರಷ್ಟು ಹೆಚ್ಚಿಸಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿರಗೊಳಿಸಿ ದ್ದಾರೆ. ಈ ಬಾರಿ ಮತ್ತೇ ರಾಜ್ಯದ ಪ್ರಗತಿಯ ಗತಿಗೆ ವೇಗ ನೀಡುವಂತಹ ಬಜೆಟ್ ಮಂಡಿಸಿದ್ದಾರೆ.
ರೈತರಿಗಾಗಿ ರೈತಉನ್ನತಿ, ಕೃಷಿಸಿರಿ, ಸಹಸ್ರ ಸರೋವರ, ಸಹ್ಯಾದ್ರಿಸಿರಿ, ಜಲನಿಧಿ ಯೋಜನೆಗಳು, ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ 3,500 ಕೋಟಿ ರು.ಗಳ ಬೆಂಬಲ ಬೆಲೆ ಆವರ್ತನಿಧಿ, ಬಡವಿದ್ಯಾರ್ಥಿ ಗಳಿಗಾಗಿ ಮುಖ್ಯಮಂತ್ರಿ ವಿದ್ಯಾಶಕ್ತಿನ, ನಮಕ್ಕಳ ಬಸ್ಸುನ, ನಹಳ್ಳಿಮುತ್ತುನ ಯೋಜನೆಗಳು, ತಾಯಿ ಮತ್ತುಮಕ್ಕಳಿಗಾಗಿ ಜೀವಸುಧೆ, ವಾತ್ಸಲ್ಯ,ನಗುಮಗು, ಯುವಜನಿರಿಗಾಗಿ ನಸ್ವಾಮೀ ವಿವೇಕಾನಂದ ಯುವಶಕ್ತಿ, ಬದುಕುವ ದಾರಿ, ಯುವಸ್ನೇಹಿ, ಗ್ರಾಮೀಣ ಸೇವೆಗಾಗಿ ಜನಸೇವಕ ಇತ್ಯಾದಿ ಯೋಜನೆಗಳನ್ನು ಬೊಮ್ಮಾಯಿಯವರು ಮಂಡಿಸಿದ್ದು, ಇದು ರಾಜ್ಯದ ಮುಂದಿನ ಪ್ರಗತಿಯ ಮಾರ್ಗಸೂಚಿಯಾಗಿದೆ ಎಂದು ಶ್ರೀಶಾ ನಾಯಕ್ ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಸಿಫುಡ್ ಪಾರ್ಕ್ ಮತ್ತು ಮರೀನಾ ಸ್ಥಾಪನೆ, ನಾರಾಯಣಗುರು ವಸತಿ ಶಾಲೆ, ಧಾರ್ಮಿಕ ಮತ್ತು ಸಾಹಸ ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಆರ್ ಝಡ್ ಸಡಿಲಿಕೆ, ಗೇರು ಲೀಸ್ ಭೂಮಿಯನ್ನು ರೈತರಿಗೆ ಖಾಯಂಗೊಳಿಸುವ ನಿರ್ಧಾರ, ಕಂಬಳ ಮತ್ತು ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹಕ್ಕೆ ಗ್ರಾಮೀಣ ಕ್ರೀಡಾಂಗಣಗಳ ನಿರ್ಮಾಣದಂತಹ ಯೋಜನೆಗಳನ್ನು ನೀಡಿರುವ ಮುಖ್ಯಮಂತ್ರಿಗಳಿಗೆ ಶ್ರೀಶ ನಾಯಕ್ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!