ಮಲ್ಪೆ: ಮೀನುಗಾರರ ಬಲೆಗೆ ಬಿತ್ತು 2ಕ್ವಿಂಟಾಲ್ ತೂಕದ ದೈತ್ಯ ಮೀನು.!

ಮಲ್ಪೆ ಬಂದರಿನಿಂದ ಆಳಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಬಲೆಗೆ ದೈತ್ಯ ಗಾತ್ರದ ಮೀನು ಸಿಕ್ಕಿದೆ. ಈ ಮೀನು ಬರೋಬ್ಬರಿ ಇನ್ನೂರು ಕೆ.ಜಿ.ತೂಕ ಹೊಂದಿದೆ.

ಶಾಂಭವಿ ಹೆಸರಿನ ಬೋಟ್ ನ ಮೀನುಗಾರರ ಬಲೆಗೆ ಈ ಮೀನು ಬಿದ್ದಿದ್ದು, ಇದನ್ನು ಸ್ಥಳೀಯವಾಗಿ ಕಟ್ಟೆ ಕೊಂಬು ಮೀನು ಎಂದು ಕರೆಯುತ್ತಾರೆ. ಈ ಜಾತಿಯ ಸಣ್ಣ ಮೀನಿಗೆ ಇರುವಷ್ಟು ಡಿಮ್ಯಾಂಡ್ ದೊಡ್ಡ ಮೀನಿಗೆ ಇಲ್ಲ.

ಈ ದೈತ್ಯ ಗಾತ್ರ ಮೀನನ್ನು ಕ್ರೇನ್ ಮೂಲಕ ವಿಲೇವಾರಿ ಮಾಡಲಾಗಿದ್ದು, ಬಂದರಿನಲ್ಲಿ ಸೇರಿದ್ದ ಮತ್ಸ್ಯ ಪ್ರಿಯರ ಗಮನ ಸೆಳೆಯಿತು. ಈ ಮೀನಿಗೆ ಕೆಜಿಗೆ ಸುಮಾರು 250 ರೂ. ನಷ್ಟು ದರ ಇದೆ ಎನ್ನುತ್ತಾರೆ ಸ್ಥಳೀಯರು.

Leave a Reply

Your email address will not be published. Required fields are marked *

error: Content is protected !!