ಗಂಗೊಳ್ಳಿ: ಇಸ್ಪೀಟ್ ಅಡ್ಡೆಗೆ ದಾಳಿ- 6 ಮಂದಿ ವಶಕ್ಕೆ

ಗಂಗೊಳ್ಳಿ ಫೆ.2(ಉಡುಪಿ ಟೈಮ್ಸ್ ವರದಿ): ಗಂಗೊಳ್ಳಿ ಮತ್ಸ ಸೌಧ ಸೊಸೈಟಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ 6 ಮಂದಿಯನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಗಂಗೊಳ್ಳಿ ಗ್ರಾಮದ ಅಂತೋನಿ ಬ್ರೋನ್ಸನ್ ಫೆರ್ನಾಂಡೀಸ್ (39), ಉತ್ತಮ್ ಖಾರ್ವಿ (46),  ಡಿಲೆಕ್ಸ್‌ ಪಿಂಟೋ (62), ಅಲೆಕ್ಸ್‌  ಫೆರ್ನಾಂಡೀಸ್ (56), ಫೆಲಿಕ್ಸ್ ಫೆರ್ನಾಂಡೀಸ್ (66), ಜಾನ್‌ ಫೆರ್ನಾಂಡೀಸ್ (55) ಪೊಲೀಸರು ವಶಕ್ಕೆ ಪಡೆದುಕೊಂಡವರು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಗಂಗೊಳ್ಳಿ ಗ್ರಾಮದ ಮತ್ಸ ಸೌಧ ಸೊಸೈಟಿಯ ಎದುರಿನ ಸಾರ್ವಜನಿಕ ಸ್ಥಳಕ್ಕೆ ದಾಳಿ ಮಾಡಿ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ 6 ಮಂದಿಯನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 1,910 ರೂ.ನಗದು ಹಾಗೂ ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!