ಹೂಡೆ: ಕಾರಿನಲ್ಲಿದ್ದ ರೂ. 7.76 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಬ್ರಹ್ಮಾವರ ಫೆ.2(ಉಡುಪಿ ಟೈಮ್ಸ್ ವರದಿ): ಕಾರಿನ ಹಿಂಬದಿ ಸೀಟಿನಲ್ಲಿ 7.76 ಲಕ್ಷ ರೂ ಮೌಲ್ಯದ ಚಿನ್ನಾಭರಣ ಇದ್ದ ಬ್ಯಾಗ್ ಇಟ್ಟು ಮನೆಯೊಳಗೆ ಹೋಗಿ ಬರುವುದರೊಳಗೆ ಕಳ್ಳರು ಕಳವು ಮಾಡಿ ಪರಾರಿಯಾಗಿರುವ ಘಟನೆ ಬ್ರಹ್ಮಾವರದ ಹೊನ್ನಾಳದಲ್ಲಿ ನಡೆದಿದೆ.

ಪಡುತೋನ್ಸೆ ಗ್ರಾಮದ ಹೂಡೆಯ ಅಫ್ರೀನ್‌ ಬಾನು ಜ.28ರಂದು ಹೊನ್ನಾಳದಲ್ಲಿರುವ ತಾಯಿ ಮನೆಯ ಹತ್ತಿರದಲ್ಲಿದ್ದ ಸಂಬಂಧಿಕರ ಮನೆಯ ಮದುವೆ ಸಮಾರಂಭಕ್ಕೆ ಹೋಗಿದ್ದರು. ಜ.30 ರಂದು‌ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ತಮ ಮನೆಗೆ ವಾಪಸ್ಸು ಹೋಗುವ ವೇಳೆ ಅವರ 180 ½ ಗ್ರಾಂ ತೂಕದ ಚಿನ್ನಾಭರಣಗಳನ್ನು ಒಂದು ಶಾಲಾ‌ ಬ್ಯಾಗ್ ನಲ್ಲಿ ಇರಿಸಿ ಕಾರಿನ ಹಿಂಬದಿ ಸೀಟಿನಲ್ಲಿ ದೊಡ್ಡ ಲಗ್ಗೇಜ್‌ ಬ್ಯಾಗಿನ ಮೇಲಿಟ್ಟು ಮನೆಯ ಒಳಗೆ ಹೋಗಿದ್ದರು. ಕೆಲ ಸಮಯದ ಬಳಿಕ ಬಂದು ಗಂಡನ ಮನೆಗೆ ಹೋಗಿದ್ದರು. ನಂತರ ಚಿನ್ನದ ಸರ ಇಟ್ಟಿದ್ದ ಬ್ಯಾಗನ್ನು ಓಪನ್‌ ಮಾಡಿ ನೋಡುವಾಗ ಅದರಲ್ಲಿಟ್ಟಿದ್ದ 7,26,000 ರೂಪಾಯಿ ಮೌಲ್ಯದ 180 ½ ಗ್ರಾಂ ತೂಕದ ಚಿನ್ನಾಭರಣಗಳು ಬ್ಯಾಗ್ ನಲ್ಲಿ ಇಲ್ಲದಿರುವುದು ಗಮನಕ್ಕೆ ಬಂದಿದೆ.ಅವರು ಕಾರಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರಬಹುದು ಎಂಬುದಾಗಿ ಅಫ್ರೀನ್ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!