ಮಣಿಪಾಲ: ಹಾಡುಹಗಲೇ ಅಪಾರ್ಟ್‍ಮೆಂಟ್‍ನಲ್ಲಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳ್ಳತನ

ಮಣಿಪಾಲ ಫೆ.3 (ಉಡುಪಿ ಟೈಮ್ಸ್ ವರದಿ) : ಇಲ್ಲಿನ ವಿದ್ಯಾರತ್ನ ನಗರದಲ್ಲಿರುವ ಅಪಾರ್ಟ್‍ಮೆಂಟ್ ವೊಂದರ ಮನೆಗೆ ಹಾಡುಹಗಲೇ ನುಗ್ಗಿದ ಕಳ್ಳರು 3.23 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಜ.29 ರ ಬೆಳಗ್ಗಿನ ಅವಧಿಯಲ್ಲಿ ಉಡುಪಿಯ ಶಿವಳ್ಳಿ ಗ್ರಾಮದ ಮಣಿಪಾಲದಲ್ಲಿರುವ ಅಪಾರ್ಟ್‍ಮೆಂಟ್‍ನ ಪ್ರವೀಣ್ ಕುಮಾರ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಮನೆಯ ಕೋಣೆಯಲ್ಲಿದ್ದ ಲ್ಯಾಪ್ ಟಾಪ್, ಕ್ಯಾಮೆರಾ, ಮೊಬೈಲ್‍ಗಳು ಸೇರಿದಂತೆ ಒಟ್ಟು 3,23,500 ರೂ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಪ್ರವೀಣ್ ಕುಮಾರ್ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!