ಮಲ್ಪೆ: ಒಂದು ವರ್ಷದ ಹೆಣ್ಣು ಮಗುವಿನೊಂದಿಗೆ ಮಹಿಳೆ ನಾಪತ್ತೆ

ಉಡುಪಿ: ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ವಿವಾಹಿತ ಮಹಿಳೆಯೊಬ್ಬರು ತನ್ನ ಒಂದು ವರ್ಷದ ಹೆಣ್ಣು ಮಗುವಿನೊಂದಿಗೆ ಮನೆಯಿಂದ ಹೊರಗೆ ಹೋದವರು ಬಳಿಕ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಪಡುತೋನ್ಸ್ ಗ್ರಾಮ ಹೊಡೆಯಲ್ಲಿ ನಡೆದಿದೆ.

ಹೊಡೆಯ ನಿವಾಸಿ 39ವರ್ಷದ ಉಸ್ತಾದ್ ಜುಬೇರ್ ಎಂಬವರ ಪತ್ನಿ 32 ವರ್ಷದ ಅನ್ಸಿಯಾ ಹಾಗೂ ಒಂದು ವರ್ಷದ ಹೆಣ್ಣು ಮಗು ಅಜೀನ್ ನಾಪತ್ತೆಯಾಗಿದ್ದಾರೆ. ಅನ್ಸಿಯಾ ಅವರು ತನ್ನ ಮಗುವಿನೊಂದಿಗೆ ನವೆಂಬರ್ 7ರಂದು ಬೆಳಿಗ್ಗೆ 10ಗಂಟೆಗೆ ತಾನು ಕೆಲಸ ಮಾಡುತ್ತಿದ್ದ ಹೈರಿಚ್ ಆಫೀಸ್ ಗೆ ಹೋಗುವುದಾಗಿ ಮನೆಯಿಂದ ಹೋಗಿದ್ದರು. ಆದರೆ ಸಂಜೆ 5 ಗಂಟೆಯಾದರೂ ಮನೆಗೆ ಬಂದಿರುವುದಿಲ್ಲ. ಬಳಿಕ‌ ಪತಿ ಜುಬೇರ್ ಅವರು ಸ್ನೇಹಿತರು, ಸಂಬಂಧಿಕರಲ್ಲಿ ವಿಚಾರಿಸಿದರೂ ಈವರೆಗೂ ಪತ್ನಿ ಹಾಗೂ‌ ಮಗವಿನ ಸುಳಿವು ಪತ್ತೆಯಾಗಿಲ್ಲ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ತಾಯಿ ಮತ್ತು ಮಗವಿನ ಬಗ್ಗೆ ಮಾಹಿತಿ ಸಿಕ್ಕಿದರೆ ದೂರವಾಣಿ ಸಂಖ್ಯೆ 0820-2537999 ಅಥವಾ ಮೊಬೈಲ್ ಸಂಖ್ಯೆ 9480805447 ಸಂಪರ್ಕಿಸುವಂತೆ ವಿನಂತಿಸಲಾಗಿದೆ.

Leave a Reply

Your email address will not be published.

error: Content is protected !!