ಆದಿಉಡುಪಿ: ಪ್ರೌಢಶಾಲೆಗೆ ನುಗ್ಗಿ 45 ಸಾವಿರ ರೂ. ಕಳ್ಳತನ

ಉಡುಪಿ ನ.7(ಉಡುಪಿ ಟೈಮ್ಸ್ ವರದಿ) : ಆದಿ ಉಡುಪಿಯ ಪ್ರೌಢಶಾಲೆಗೆ ನುಗ್ಗಿದ ಕಳ್ಳರು 45,144 ರೂ. ನಗದು ಕಳವು ಮಾಡಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾದ ರವೀಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ನ.6 ರ ರಾತ್ರಿಯಿಂದ ನ.7 ರ ಬೆಳಗ್ಗಿನ ಅವಧಿಯಲ್ಲಿ ಪ್ರೌಢ ಶಾಲೆಗೆ ನುಗ್ಗಿದ ಕಳ್ಳರು ಶಾಲಾ ಕಛೇರಿಯ ಬೀಗ ಒಡೆದು ಕಬಾಟಿನಲ್ಲಿ  ಆರ್‌.ಡಿ , ಪ್ರೈವೇಟ್‌ ನಗದು, ಮಕ್ಕಳ ಪರೀಕ್ಷಾ ಶುಲ್ಕ, ಅಕ್ಷರ ದಾಸೋಹದ ಸಹಿತ ಇತರ ಉದ್ದೇಶಗಳಿಗೆ ಇಟ್ಟಿದ್ದ ಒಟ್ಟು  45,144 ರೂ. ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!