ನಿಟ್ಟೆ : ಗ್ರಾಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಸಚಿವ ಸುನಿಲ್ ಕುಮಾರ್

ನಿಟ್ಟೆ ನ.7 (ಉಡುಪಿ ಟೈಮ್ಸ್ ವರದಿ) : ಶ್ರೀಕೇಶವ ಭಜನಾ ಮಂಡಳಿಯ ಅರ್ಧಮಂಡಲೋತ್ಸವ ಪ್ರಯುಕ್ತ 2023 ರ ಜ.12 ರಿಂದ ಜ.14 ರ ವರೆಗೆ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ನಿನ್ನೆ ಪರಪ್ಪಾಡಿ ಶ್ರೀ ಕೇಶವ ನಗರದ ಭಜನಾ ಮಂಡಳಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಯಾಗ ಸಮಿತಿಯ ಗೌರವಾಧ್ಯಕ್ಷರು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರು ಆಮಂತ್ರಣ ಪತ್ರಿಕೆಯ ಬಿಡುಗಡೆಗೊಳಿಸಿದರು. ಬಳಿಕ 3 ದಿನಗಳ ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭ ಹಾರೈಸಿದರು.

ಈ ಸಂದರ್ಭ ವೇದಿಕೆಯಲ್ಲಿ ಜೀವಂಧರ್ ಕುಮಾರ್, ವೇದಮೂರ್ತಿ ಪ್ರಸನ್ನ ಆಚಾರ್, ಮುರಳೀಧರ್ ಶರ್ಮಾ, ಬಿ ಕೆ ನಾಯ್ಕ್, ಡಾಕ್ಟರ್ ಸುರೇಶ್ ಶೆಟ್ಟಿ, ಅಶೋಕ್ ಅಡ್ಯಂತಾಯ, ಪ್ರಶಾಂತ್ ಜೈನ್, ಭಜನಾ ಮಂಡಳಿಯ ಸಂಚಾಲಕರು ಓ ಸುರೇಶ್ ಭಟ್, ಅಧ್ಯಕ್ಷರು ಗಣೇಶ್ ಪೂಜಾರಿ, ಮಹಿಳಾ ಮಂಡಳಿಯ ಅಧ್ಯಕ್ಷೆ ಹೇಮಲತಾ ಅರ್ ಸಾಲಿಯಾನ್, ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ಸುರೇಶ್ ಭಟ್ ನೆಲ್ಲಿಮಾರ್ ಉಪಸ್ಥಿತರಿದ್ದರು.

ಶ್ರೀಕೇಶವ ಭಜನಾ ಮಂಡಳಿಯ ಅರ್ಧಮಂಡಲೋತ್ಸವ ಪ್ರಯುಕ್ತ ಗ್ರಾಮೋತ್ಸವ, ಸಾರ್ವಜನಿಕ ಗಣಯಾಗ, ಭಜನಾ ಮಂಗಲೋತ್ಸವ, ಧನ್ವಂತರಿಯಾಗ, ಶ್ರೀ ಸತ್ಯನಾರಾಯಣ ಪೂಜೆ, ಶನೇಶ್ಚರ ಮಹಾಯಾಗ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜ.12 ರಿಂದ ಜ.14 ರ ವರೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published.

error: Content is protected !!