ಕುಂದಾಪುರ: ಸಂಬಳ ಕೊಡದ ಬಾರ್ ಮ್ಯಾನೇಜರ್’ಗೆ ಹಲ್ಲೆ

ಕುಂದಾಪುರ ನ.7 (ಉಡುಪಿ ಟೈಮ್ಸ್ ವರದಿ): ತಾಲೂಕಿನ ಕಸಬಾ ಗ್ರಾಮದ ಬಾರ್ ವೊಂದರಲ್ಲಿ ಸಂಬಳ ಕೊಡುವ ವಿಚಾರಕ್ಕೆ ಸಂಬಂಧಿಸಿ ವೈಟರ್ ವೋರ್ವ ಬಾರ್ ನ ಮ್ಯಾನೇಜರ್ ಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಹಲ್ಲೆಗೊಳಗಾದ ಬಾರ್ ನ ಮ್ಯಾನೇಜರ್ ಹಾಗೂ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಸಂತೋಷ್ ಕುಮಾರ್ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ನ.11 ರಂದು ಸಂಜೆ ವೇಳೆ ಬಾರ್ ನಲ್ಲಿ ವೈಟರ್ ಆಗಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಎಂಬಾತ ಇತರ 3 ಜನರನ್ನು ಕರೆದುಕೊಂಡು ಬಾರ್ ನ ಒಳಗಡೆ ಅಕ್ರಮ ಪ್ರವೇಶ ಮಾಡಿ, ಸಂಬಳ ಕೊಡುವ ವಿಚಾರದಲ್ಲಿ ಸಂತೋಷ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಸಂಬಳ ಈಗಲೇ ಕೊಡಬೇಕು ಎಂದು ಹೇಳಿ ಹೊಡೆದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಬಾರ್ ನ ಮಾಲಿಕರಿಗೂ ಅವಾಚ್ಯವಾಗಿ ಬೈದಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

error: Content is protected !!