ತಾತ್ಕಾಲಿಕವಾಗಿ ಸ್ಥಗಿತಗೊಂಡ ವಾಟ್ಸಾಪ್‌ ಪುನಾರಂಭ

ಹೊಸದಿಲ್ಲಿ ಅ.25 : ಜನಪ್ರಿಯ ಸಂವನ ವಸ್ತುವಾಗಿ ಮಾರ್ಪಟ್ಟಿರುವ ವಾಟ್ಸಾಪ್‌ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಇಂದು ಗೊಂದಲಕ್ಕೆ ಕಾರಣವಾಗಿತ್ತು.

ಭಾರತದ ಹಲವು ನಗರಗಳಲ್ಲಿ ಈ ತೊಂದರೆ ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಮೆಸೇಜ್‌ ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಹಲವಾರು ಭಾರತೀಯ ಬಳಕೆದಾರರು ಟ್ವಿಟರ್‌ ನಲ್ಲಿ ದೂರಿಕೊಂಡಿದ್ದಾರೆ.

ಈ ಹಿಂದೆಯೂ ಕೆಲ ಬಾರಿ ವಾಟ್ಸಪ್‌ ಸರ್ವರ್‌ ಡೌನ್‌ ಆಗಿದ್ದು, ಕೆಲ ಸಮಯಗಳ ಬಳಿಕ ಅದನ್ನು ಮರುಸ್ಥಾಪಿಸಲಾಗಿತ್ತು. #whatsappdown ಸದ್ಯ ಸಾಮಾಜಿಕ ತಾಣದಲ್ಲಿ ಟ್ರೆಂಡಿಂಗ್‌ ಆಗಿದ್ದು, ಹಲವು ಟ್ವಿಟರ್‌ ಬಳಕೆದಾರರು ತಮಾಷೆಯ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕುರಿತು ವಾಟ್ಸಾಪ್‌ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆಯನ್ನು ಪ್ರಕಟಿಸಿಲ್ಲ.

ಸದ್ಯ ಈ ಸಮಸ್ಯೆ ಬಗೆಹರಿದಿದ್ದು ಕೆಲ ಕಾಲ ವಾಟ್ಸಪ್ ಬಳಕೆದಾರರನ್ನು ಗೊಂದಲಕ್ಕೀಡುಮಾಡಿತ್ತು. ಇನ್ನು ಅನೇಕರ ಅಗತ್ಯ ಸಂವಹನಕ್ಕೂ ಅಡ್ಡಿಯಾಗಿದ್ದಂತೂ ಸತ್ಯ.

Leave a Reply

Your email address will not be published. Required fields are marked *

error: Content is protected !!