ದೊಡ್ಡಣಗುಡ್ಡೆ ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರಕ್ಕೆ ಹರಿದು ಬರುತ್ತಿರುವ ಭಕ್ತ ಜನಸಾಗರ…

ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವದ ಪರ್ವಕಾಲದಲ್ಲಿ ಶ್ರೀಕ್ಷೇತ್ರ ಸಂದರ್ಶನಕ್ಕಾಗಿ ಬರುವ ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಸರ್ವಧರ್ಮ ಸಮನ್ವತೆಯ ಕ್ಷೇತ್ರವಾಗಿ ಸರ್ವಧರ್ಮೀಯ ಭಕ್ತರಿಂದಲೂ ಸೇವೆ ಸ್ವೀಕರಿಸಿ ತನ್ನ ಕಾರಣಿಕತೆಯಿಂದ ಬೇಡಿ ಬಂದ ಭಕ್ತರ ಇಷ್ಟಾರ್ಥವನ್ನು ಕರುಣಿಸುವ ಶಕ್ತಿಸ್ವರೂಪಿಣಿಯಾಗಿ ಮನೆಮಾತಾಗಿರುವ ಶ್ರೀದುರ್ಗಾ ಆದಿಶಕ್ತಿ ಮಾತೆಯ ಸನ್ನಿಧಾನ ಯಾತ್ರಾಸ್ಥಳವಾಗಿ ಗುರುತಿಸಲ್ಪಟ್ಟಿದೆ .
ಊರ ಭಕ್ತರು ಮಾತ್ರವಲ್ಲದೆ ಪರವೂರಿನ ಭಕ್ತರು ಕೂಡ ತಂಡೋಪತಂಡವಾಗಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ ದಿನಂಪ್ರತಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕ್ಷೇತ್ರವನ್ನು ಭಕ್ತರು ಸಂದರ್ಶಿಸುತ್ತಿದ್ದಾರೆ ಹಾಗೂ ಕ್ಷೇತ್ರದ ಮಹಾಪ್ರಸಾದವಾದ ಅನ್ನಪ್ರಸಾದವನ್ನು ಸ್ವೀಕರಿಸುತ್ತಿದ್ದಾರೆ.

ಕ್ಷೇತ್ರದ ಧರ್ಮದರ್ಶಿ ಶ್ರೀರಮಾನಂದ ಗುರೂಜೀ ಮಾರ್ಗದರ್ಶನದಲ್ಲಿ ನಿತ್ಯವೂ ಜೋಡಿ ಚಂಡಿಕಾಯಾಗ ಲಲಿತ ಸಹಸ್ರ ಕದಳೀಯಾಗ ದುರ್ಗಾ ನಮಸ್ಕಾರ ಪೂಜೆ ರಂಗಪೂಜೆ ಯಂತಹ ಧಾರ್ಮಿಕ ಪ್ರಕ್ರಿಯೆಗಳು ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ಸಮರ್ಪಿಸಲ್ಪಡುವ ನೃತ್ಯಸೇವೆ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಸಂಪನ್ನಗೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ದೊಡ್ಡಣಗುಡ್ಡೆಯ ಪರಿಸರದಲ್ಲಿ ದೈವಿಕ ಚೈತನ್ಯ ಪಸರಿಸಿ ದಂತಾಗಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿರುತ್ತಾರೆ

Leave a Reply

Your email address will not be published. Required fields are marked *

error: Content is protected !!