ಉಡುಪಿ: “ಬೌನ್ಸರ್” ವಿರುದ್ದ ರಿಕ್ಷಾ ಚಾಲಕರ ಪ್ರತಿಭಟನೆ

ಉಡುಪಿ: ಉಡುಪಿ ಹಾಗೂ ಮಣಿಪಾಲದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ದ್ವಿಚಕ್ರವಾಹನ ಬಾಡಿಗೆಗೆ ನೀಡುವ ಕಂಪೆನಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಯಾವುದೇಕಾರಣಕ್ಕೂ ಈ ಕಂಪೆನಿಗಳಿಗೆ ಪರವಾನಗಿ ನೀಡಬಾರದು ಎಂದು ಒತ್ತಾಯಿಸಿ ಮಣಿಪಾಲ ಆಟೊಚಾಲಕರ ಮತ್ತು ಮಾಲೀಕರ ಸಂಘ ಹಾಗೂ ಉಡುಪಿ ಜಿಲ್ಲಾ ಆಟೊ ಚಾಲಕರ ಮತ್ತು ಮಾಲೀಕರಒಕ್ಕೂಟದ ನೇತೃತ್ವದಲ್ಲಿ ಆಟೊ ಚಾಲಕರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಒಂದುದಿನದ ಮುಷ್ಕರ ನಡೆಸಿದರು.ಇಂದು ಬೆಳಿಗ್ಗೆ 6ಗಂಟೆಯಿಂದ ಚಾಲಕರು ತಮ್ಮ ಆಟೊಗಳ ಸಂಚಾರವನ್ನು ಸಂಪೂರ್ಣವಾಗಿಸ್ಥಗಿತಗೊಳಿಸಿದರು.

ಬೆಳಿಗ್ಗೆ 10ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿ ಎದುರುಜಮಾಯಿಸಿದ ಆಟೊ ಚಾಲಕರು, ದ್ವಿಚಕ್ರ ವಾಹನ ಬಾಡಿಗೆ ಕಂಪೆನಿಗಳ ವಿರುದ್ಧ ಘೋಷಣೆಕೂಗಿದರು. ನಗರದ ಪ್ರಮುಖ ಕಡೆಗಳಲ್ಲಿ ತೆರೆಯಲಾಗಿರುವ ಬಾಡಿಗೆ ದ್ವಿಚಕ್ರ ವಾಹನಗಳನ್ನುಕೂಡಲೇ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.ಮಣಿಪಾಲ ಆಟೊ ಚಾಲಕರ ಮತ್ತು ಮಾಲೀಕರ ಸಂಘ ಅಧ್ಯಕ್ಷ ಪ್ರದೀಪ್‌ ಪೂಜಾರಿ ಮಾತನಾಡಿ,ಉಡುಪಿ ತಾಲ್ಲೂಕಿನಲ್ಲಿ ಒಟ್ಟು 6 ಸಾವಿರ ಮಂದಿ ಆಟೊದಲ್ಲಿ ದುಡಿದು ತಮ್ಮ ಕುಟುಂಬನಿರ್ವಹಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬಂದ ಜೆಮೊಟೋ, ಸ್ವಿಗ್ಗಿಯಂತಹ ಆಹಾರಪೂರೈಕೆ ಸಂಸ್ಥೆಗಳಿಂದ ಆಟೊ ಚಾಲಕರಿಗೆ ಬಾಡಿಗೆ ಇಲ್ಲದೆ ಪರದಾಡುತ್ತಿದ್ದಾರೆ. ಇದೀಗಬಾಡಿಗೆ ವಾಹನಗಳ ಹಾವಳಿಯಿಂದ ಆಟೊ ಚಾಲಕರು ಸಂಪೂರ್ಣವಾಗಿ ಬೀದಿ ಬಿದಿದ್ದಾರೆ ಎಂದುಅಳಲು ತೋಡಿಕೊಂಡರು.ನಗರದ ಪ್ರಮುಖ ಬೀದಿಗಳಲ್ಲಿ ಕಾರ್ಯಾಚರಿಸುತ್ತಿರುವ ಬಾಡಿಗೆ ದ್ವಿಚಕ್ರ ವಾಹನಗಳನ್ನುವಶಕ್ಕೆ ಪಡೆಯಬೇಕು. ಇಲ್ಲದಿದ್ದರೆ ಜಿಲ್ಲೆಯನ್ನು ಬಂದ್‌ ಮಾಡಿ ಅಹೋರಾತ್ರಿಧರಣಿಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.ಶಾಸಕ ರಘುಪತಿ ಭಟ್‌ ಮಾತನಾಡಿ, ಬಹುರಾಷ್ಟ್ರೀಯ ಕಂಪೆನಿಗಳು ಸ್ಥಳೀಯವಾಗಿ ಯಾವುದೇಅನುಮತಿ ಪಡೆಯದೆ ಬಾಡಿಗೆಗೆ ಬೈಕ್‌ಗಳನ್ನು ನೀಡುತ್ತಿದ್ದು, ಇದರಿಂದ ಬಡ ಆಟೊಚಾಲಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಅಲ್ಲದೆ ಈ ಬಾಡಿಗೆ ಬೈಕ್‌ಗಳನ್ನು ಅಕ್ರಮವ್ಯವಹಾರ, ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇವೆ. ಹಾಗಾಗಿ ಈ ಬಗ್ಗೆಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚಾಲಕರ ಮಧ್ಯೆ ಮಾತಿನ ಚಕಮಕಿದ್ವಿಚಕ್ರ ವಾಹನ ಬಾಡಿಗೆಗೆ ನೀಡುವ ಕಂಪೆನಿಗಳಿಗೆ ಪರವಾನಗಿ ನೀಡದಂತೆ ಕೂಡಲೇಹೈಕೋರ್ಟ್‌ನಿಂದ ತಡೆಯಾಜ್ಞೆ ತರಬೇಕು. ಒಂದು ವೇಳೆ ಕಂಪೆನಿಗಳು ರಾಜ್ಯ ಸರ್ಕಾರದಿಂದಅನುಮತಿ ಪಡೆದರೆ ಮತ್ತೆ ಅವರನ್ನು ತಡೆಯುವುದು ಕಷ್ಟ ಎಂದು ಶಾಸಕ ರಘುಪತಿ ಭಟ್‌ಅಸಹಾಯಕತೆ ವ್ಯಕ್ತಪಡಿಸಿದರು. ಇದಕ್ಕೆ ಅಸಮಾಧಾನಗೊಂಡ ಕೆಲ ಚಾಲಕರು, ಕಂಪೆನಿಗಳುಅನಧಿಕೃತವಾಗಿ ದ್ವಿಚಕ್ರಗಳನ್ನು ಬಾಡಿಗೆಗೆ ನೀಡುತ್ತೇವೆ. ಹಾಗಾಗಿ ಕೋರ್ಟ್‌ಗೆಹೋಗುವುದರಿಂದ ಇದಕ್ಕೆ ಸೂಕ್ತ ಪರಿಹಾರ ಸಿಗುವುದಿಲ್ಲ. ಇದಕ್ಕೆ ತಾವೇ ರಾಜ್ಯ ಸರ್ಕಾರದಮೇಲೆ ಒತ್ತಡ ಹೇರಿ ಕಂಪೆನಿಗಳಿಗೆ ಪರವಾನಗಿ ನೀಡದಂತೆ ಒತ್ತಡ ಹೇರಬೇಕು ಎಂದುಒತ್ತಾಯಿಸಿದರು. ಈ ವೇಳೆ ಚಾಲಕರ ಮಧ್ಯೆಯೇ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಕೆಲಚಾಲಕರು ಶಾಸಕರು ಹಾಗೂ ಮುಖಂಡರ ವಿರುದ್ಧವೂ ಹರಿಹಾಯ್ದರು.
ಆಟೊ ಚಾಲಕರಿಂದ ಒಂದು ದಿನದ ಮುಷ್ಕರಬಾಡಿಗೆ ದ್ವಿಚಕ್ರ ವಾಹನಗಳ ವಿರುದ್ಧ ಕ್ರಮಕ್ಕೆ ಆಗ್ರಹ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್‌ ಅವರು, ದ್ವಿಚಕ್ರ ವಾಹನಗಳನ್ನು ಬಾಡಿಗೆ ನೀಡುವ ‘ಬೌನ್ಸ್‌’ ಕಂಪೆನಿಗೆಉಡುಪಿಯಲ್ಲಿ ಆರಂಭಿಸಲು ಆರ್‌ಟಿಒ ಹಾಗೂ ಜಿಲ್ಲಾಡಳಿತದಿಂದ ಯಾವುದೇ ಅನುಮತಿಕೊಟ್ಟಿಲ್ಲ. ಆದರೂ ಸಾರ್ವಜನಿಕ ಸ್ಥಳಗಳಲ್ಲಿ ಬೌನ್ಸ್‌ ಬೈಕ್‌ಗಳನ್ನು ನಿಲ್ಲಿಸಿ,ಬಾಡಿಗೆಗೆ ಬೈಕ್‌ ನೀಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ನಗರಸಭೆಆಯುಕ್ತರಿಗೆ ತಿಳಿಸಿದ್ದೇನೆ. ಅಲ್ಲದೆ ಬೈಕ್‌ಗಳನ್ನು ವಶಕ್ಕೆ ಪಡೆಯುವಂತೆಸೂಚಿಸಿದ್ದೇನೆ ಎಂದರು.

ಪರವಾನಗಿ ಸಿಗುವವರೆಗೂ ಬೌನ್ಸ್‌ ಬೈಕ್‌ಗಳನ್ನು ಇಡಬಾರದು ಎಂದು ಈಗಾಗಲೇ ಕಂಪೆನಿಗಳಿಗೆಸೂಚಿಸಲಾಗಿದೆ. ಅನುಮತಿ ನೀಡುವ ವಿಚಾರ ನಮಗೆ ಬರುವುದಿಲ್ಲ. ಅದು ರಾಜ್ಯ ಸರ್ಕಾರದಮಟ್ಟದಿಂದ ಆಗಬೇಕಾಗಿದೆ. ಒಂದು ವೇಳೆ ಸರ್ಕಾರದಿಂದ ಅವರು ಅನುಮತಿ ಪಡೆದುಕೊಂಡುಬಂದರೆ, ಅದನ್ನು ನಮ್ಮಿಂದ ನಿಲ್ಲಿಸಲು ಆಗವುದಿಲ್ಲ ಎಂದು ಹೇಳಿದರು.9 ಬೌನ್ಸ್‌ ಬೈಕ್‌ ವಶಮಣಿಪಾಲ ಸಾರ್ವಜನಿಕ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ 9 ಬೌನ್ಸ್‌ ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ಬೈಕ್‌ಗಳನ್ನು ಕೂಡಲೇ ವಶಕ್ಕೆಪಡೆಯುವಂತೆ ಆರ್‌ಟಿಒ ಹಾಗೂ ನಗರಸಭೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿತಿಳಿಸಿದರು.ಡಿಸಿ ಭರವಸೆ; ಮುಷ್ಕರ ವಾಪಸ್‌ಬೌನ್ಸ್‌ ಬೈಕ್‌ಗಳ ವಿರುದ್ಧ ಡಿಸಿ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದಹಿನ್ನೆಲೆಯಲ್ಲಿ ಆಟೊ ಚಾಲಕರು ಮುಷ್ಕರವನ್ನು ಹಿಂಪಡೆದರು.ಒಕ್ಕೂಟದ ಅಧ್ಯಕ್ಷ ಮಹೇಶ್‌ ಠಾಕೂರ್‌, ಕೃಷ್ಣಮೂರ್ತಿ ಆಚಾರ್ಯ, ನಗರಸಭಾ ಸದಸ್ಯರಾದಮಂಜುನಾಥ್‌ ಮಣಿಪಾಲ, ರಮೇಶ್‌ ಕಾಂಚನ್‌, ಸಂಘದ ಕಾರ್ಯದರ್ಶಿ ಹರೀಶ್‌ ಪೂಜಾರಿ,ಆಶ್ರಯದಾತ ಆಟೊ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡುಬೆಟ್ಟು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!