ಗ್ಯಾಸ್ ಲೈಟ್ ಗೆ ಓಡೋಡಿ ಬಂದರು…ಇದು ಉಡುಪಿ ಟೈಮ್ಸ್ ವರದಿ ಫಲಶ್ರುತಿ

ಉಡುಪಿ -ಕುಕ್ಕಿಕಟ್ಟೆ ನಾಗರಿಕರ ಗ್ಯಾಸ್ ಲೈಟ್ ವಿನೂತನ ಪ್ರತಿಭಟನೆಗೆ ಎಚ್ಚೆತ್ತ  ಉಡುಪಿ ನಗರಸಭೆ. “ಉಡುಪಿ ಟೈಮ್ಸ್ ” ವರದಿ ಪ್ರಕಟಿಸಿದ ಎರಡೇ ತಾಸಿನಲ್ಲಿ ಹೈಮಾಸ್ಟ್ ದೀಪ ದುರಸ್ತಿಗೊಳಿದ್ದು, ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.ಕುಕ್ಕಿಕಟ್ಟೆ ಅಯ್ಯಪ್ಪ ಮಂದಿರದ ಎದುರು ಇಲ್ಲಿನ ರಿಕ್ಷಾ , ಟೆಂಪೋ ಚಾಲಕರು ಹಾಗೂ  ಸ್ಥಳೀಯ ನಿವಾಸಿಗಳು ಕಳೆದ ಹಲವಾರು ತಿಂಗಳಿನಿಂದ ಹೈಮಾಸ್ಟ್ ದೀಪದ ಕೆಟ್ಟು ಹೋದ ಬಗ್ಗೆ ನಗರಸಭೆಗೆ ದೂರು ನೀಡಿದ್ದ ರು , ನಗರಸಭೆ ಅಧಿಕಾರಿಗಳು  ದೂರಿಗೆ ಕ್ಯಾರೆ ಎನ್ನಲಿಲ್ಲ.

ಅದಕ್ಕಾಗಿ ನಿನ್ನೆ ರಾತ್ರಿ ವಿನೂತನ ಪ್ರತಿಭಟನೆ ರೂಪದಲ್ಲಿ ವಿದ್ಯುತ್ ಕಂಬಕ್ಕೆ ಗ್ಯಾಸ್ ಲೈಟ್ ಅಳವಡಿಸಿ ಅದನ್ನು ಉರಿಸಿದರು .ಈ ಮಾಹಿತಿ ತಿಳಿದ ತಕ್ಷಣ ಉಡುಪಿ ಟೈಮ್ಸ್  ಇಂದು ಬೆಳಿಗ್ಗೆ ಈ ಬಗ್ಗೆ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಈ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಉಡುಪಿ ನಗರಸಭೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಹೈಮಾಸ್ಟ್ ದೀಪವನ್ನು ದುರಸ್ತಿಗೊಳಿಸಿದರು.  ವಿನೂತನ ಪ್ರತಿಭಟನೆಯನ್ನು ಇಂದು ಬೆಳಿಗ್ಗೆ ಪ್ರಕಟಿಸಿದ ಉಡುಪಿ ಟೈಮ್ಸ್ ಗೆ ಇಲ್ಲಿನ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!