ಉಡುಪಿ: ಕಾರ್ಮಿಕನಿಂದ ಹಾಡುಗಲೇ ಮನೆಯಲ್ಲಿದ್ದ ಲಕ್ಷಾಂತರ ರೂ.ಕಳವು

ಉಡುಪಿ: ಇಲ್ಲಿನ ನಗರದ ಬೀಡಿನಗುಡ್ಡೆಯ ಹರೀಶ್ಚಂದ್ರ ಮಾರ್ಗದ ಮನೆಯೊಂದರಲ್ಲಿ ಹಾಡುಹಗಲೇ ಲಕ್ಷಾಂತರ ನಗದು ದೋಚಿದ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ.
ಉಡುಪಿ ವೆಂಕಟರಮಣ ದೇವಾಸ್ಥಾನದ ಬಳಿಯ ನಿವಾಸಿಯಾದ ಸುನಂದ ಮಾಣಿಕ್ ಪಾಟೀಲ್ ನಿನ್ನೆ ಮಧ್ಯಾಹ್ನ 12.15 ಕ್ಕೆ ತನ್ನ ಮಕ್ಕಳಿಗೆ ಶ್ರೀಕೃಷ್ಣ ದೇವಸ್ಥಾನ ರಾಜಾಂಗಣದ ಹತ್ತಿರವಿರುವ ಮುಕುಂದ ಕೃಪಾ ಶಾಲೆಗೆ ಊಟ ಕೊಡಲು ಶಾಲೆಗೆ ಹೋದ ಸಂದರ್ಭ ಮನೆಯ ಬೀಗ ಮುರಿದು ಅಡುಗೆ ಕೋಣೆಯ ಡಬ್ಬದಲ್ಲಿದ್ದ 22 ಲಕ್ಷ ನಗದು ಮತ್ತು ಅರ್ಧ ಕೆಜಿ ಬೆಳ್ಳಿಯ ಗಟ್ಟಿಯನ್ನು ಕಳವು ಮಾಡಿರುವುದಾಗಿ ಉಡುಪಿ ನಗರ ಠಾಣೆಗೆ ದೂರು ನೀಡಲಾಗಿದೆ.


ಮನೆ ದೊಚಿರುವ ವ್ಯಕ್ತಿಯು ಸಾಂಗ್ಲಿಯ ಅತುಲ್ ಬಾಗ್ನೆ ಈ ಹಿಂದೆ ಸುನಂದರ ಗಂಡನ ಅಂಗಡಿಯಲ್ಲಿ ಚಿನ್ನಾಭಾರಣ ಕರಗಿಸು ಕೆಲಸಕ್ಕಿದ್ದ. ಇತ್ತೀಚೆಗೆ ಅವನ ವರ್ತನೆ ಬಗ್ಗೆ ಸಂಶಯಗೊಂಡು ಕೆಲಸದಿಂದ ತೆಗೆದು ಹಾಕಿದ್ದು ಇತನೇ ಈ ಕೃತ್ಯ ಎಸಗಿರುವ ಬಗ್ಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.


ಕೆಲಸ ಬಿಟ್ಟು ಎರಡು ತಿಂಗಳ ನಂತರ ತನ್ನ ಊರಿನ ಸ್ನೇಹಿತನೊಂದಿಗೆ ಬಂದು ಈ ಮನೆ ದೋಚಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಮನೆ ದೋಚಿದ ಆರೋಪಿಗಳು ರೈಲು ಮೂಲಕ ಮುಂಬಾಯಿ ಕಡೆ ಪರಾರಿಯಾಗಿರುವ ಸಂಶಯ ವ್ಯಕ್ತವಾಗಿದ್ದು ಉಡುಪಿ ನಗರ ಠಾಣಾ ಪೊಲೀಸರು ಆರೋಪಿಗಳ ಪತ್ತೆಗೆ ತೆರಳಿದ್ದಾರೆಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!