ನೆತ್ತರಕೆರೆಗೆ ಬಾಗಿನ ಸಮರ್ಪಣೆ

ಬಂಟ್ವಾಳ: ಪ್ರಕೃತಿಗೆ ಯಾರಲ್ಲೂ ದ್ವೇಷವಿಲ್ಲ , ಪ್ರಕೃತಿಗೆ ನಾವು ವಿಮುಖವಾದಲ್ಲಿ  ಪ್ರಕೃತಿಯೂ ನಮಗೆ ಪ್ರತಿಕೂಲವಾಗಲಿದೆ , ಪ್ರಕೃತಿಯನ್ನು ಉಳಿಸಿ ಬೆಳೆಸುವ ಅರಿವು ನಮಗಿಲ್ಲದ ಪರಿಣಾಮ ಅನಾಹುತಗಳಿಗೆ ಕಾರಣ ವಾಗಿದೆ , ಅದರ ವಿನಃ ನಮಗೆ ಭವಿಷ್ಯವಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಬಿ.ಸಿ.ಟ್ರಸ್ಟ್ ಉಡುಪಿಯ ಪ್ರಾದೇಶಿಕ ನಿರ್ದೇಶಕರಾದ ಮಹಾವೀರ ಆಜ್ರಿ ಹೇಳಿದ್ದಾರೆ.    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ .ಸಿ. ಟ್ರಸ್ಟ್ (ರಿ) ಬಂಟ್ವಾಳ ಇದರ ಮಾರ್ಗದರ್ಶನ ಹಾಗು ಆರ್ಥಿಕ ಸಹಕಾರದೊಂದಿಗೆ ಕೆರೆ ಅಭಿವೃದ್ಧಿ ಸಮಿತಿ ನೆತ್ತರಕೆರೆ ಇದರ ಸಹಭಾಗಿತ್ವದೊಂದಿಗೆ  ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮ ದಡಿ ಪುನಶ್ಚೇತನಗೊಳಿಸಲಾದ ಪುದು ಗ್ರಾಮದ  ನೆತ್ತರಕೆರೆಗೆ ಬಾಗಿನ ಸಮರ್ಪಣೆ ಕಾರ್ಯಕ್ರಮ ದಲ್ಲಿ ಬಾಗಿನ ಅರ್ಪಿಸಿ  ಅವರು ಮಾತನಾಡಿದರು.     ಜಲ ಮೂಲಗಳನ್ನು ನಾವು ಕಾಪಾಡಬೇಕು,ಇತ್ತೀಚಿಗಿನ ದಿನಗಳಲ್ಲಿ ಕೆರೆ , ಕಟ್ಟೆ ಗಳು ತ್ಯಾಜ್ಯಸಂಗ್ರಹಗಾರವಾಗುವುದು ಖೇದಕರ , ನಮ್ಮ ಜಿಲ್ಲೆ ಪ್ರಾಕೃತಿಕವಾಗಿ ಶ್ರೀಮಂತವಾಗಿದೆ ಅದರ ಸ್ವಚ್ಛತೆಯನ್ನು ಕಾಪಾಡುವ ಕೆಲಸ ನಮ್ಮಿಂದಾಗಲಿ ಎಂದು ಹೇಳಿದರು.

 ಕಾರ್ಯಕ್ರಮ  ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಅವರು ಉದ್ಘಾಟಿಸಿ, ಮಾತನಾಡಿ ಗ್ರಾಮದಲ್ಲಿ ಉತ್ತಮವಾದ ನೀರಿನ ಮೂಲವಿದ್ದಲ್ಲಿ ಕೃಷಿ ಅಭಿವೃದ್ಧಿ ಯಾಗಿ ಗ್ರಾಮ ಸ್ವಾವಲಂಬನೆ ಸಾದಿಸಬಹುದು . ಈಗಾಗಲೇ ಜಿಲ್ಲಾ ಪಂಚಾಯತ್ ಅನುದಾನ ದಿಂದ 2 ಲಕ್ಷ ರೂ.ವನ್ನು ಈ ಕೆರೆಯ ತಡೆಗೋಡೆ ನಿರ್ಮಾಣಕ್ಕೆ ವಿನಿಯೋಗಿಸಲಾಗಿದೆ ಎಂದರು.
ನೆತ್ತರಕರೆ ಅಭಿವೃದ್ಧಿ ಸಮಿತಿ  ಅಧ್ಯಕ್ಷ ಸಂತೋಷ್ ಕುಮಾರ್  ಅದ್ಯಕ್ಷತೆ ವಹಿಸಿದ್ದರು.   ವೇದಿಕೆಯಲ್ಲಿ ತಾಪಂ ಸದಸ್ಯೆ ಪದ್ಮಶ್ರೀ ದುರ್ಗೇಶ್ ಶೆಟ್ಟಿ , ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್  ಮಾರಿಪಳ್ಳ , ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ , ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೊಡ್ಮಣ್ ಕಾಂತಪ್ಪ ಶೆಟ್ಟಿ , ಬಂಟ್ವಾಳ ತಾಲೂಕು ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ ಮಾಧವ ವಳವೂರು , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ , ನವೋದಯ ಮಿತ್ರ ಕಲಾ ವೃಂದ ದ ಅಧ್ಯಕ್ಷ ಸುರೇಶ ಭಂಡಾರಿ ಅರ್ಭಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಫರಂಗಿಪೇಟೆ  ಒಕ್ಕೂಟದ ಅಧ್ಯಕ್ಷ ಪದ್ಮನಾಭ , ಮತ್ತಿತರರು ಉಪಸ್ಥಿತರಿದ್ದರು

  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಯೋಜನಾಧಿಕಾರಿ  ಜಯಾನಂದ ಪಿ  ಯವರು ಸ್ವಾಗತಿಸಿದರು , ನೆತ್ತರಕೆರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ   ದಾಮೋದರ ನೆತ್ತರಕೆರೆ ವಂದಿಸಿದರು , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಕೃಷಿ ಮೇಲ್ವಿಚಾರಕರಾದ ಜನಾರ್ಧನ ರವರು ನಿರೂಪಿಸಿದರು .

Leave a Reply

Your email address will not be published. Required fields are marked *

error: Content is protected !!