ಕಾಂಗ್ರೆಸ್ ಪಕ್ಷದ ಸಾಧನೆ ಜನರಿಗೆ ತಿಳಿಸಿ: ರೈ

ಬಂಟ್ವಾಳ: ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ಮನಮುಟ್ಟುವಂತೆ ತಿಳಿಹೇಳಿ ಜನರ ಮನಸ್ಸನ್ನು ಗೆಲ್ಲುವಂತೆ ಮಾಜಿ ಸಚಿವ ಬಿ.ರಮಾನಾಥ ರೈ ಕರೆ ನೀಡಿದರು‌.   ಬಂಟ್ವಾಳ ತಾಲೂಕಿನ ಪೆರಿಯಪಾದೆ ಜಂಕ್ಷನ್‌ನಲ್ಲಿ ಸರಪಾಡಿ ಪಂಚಾಯತ್ ವಲಯದ’ ಪಂಚಾಯತ್ ಮಿಲನ 2019 ‘ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ    ಬೂತ್ ಮಟ್ಟದಲ್ಲಿ ಪಕ್ಷವನ್ನು ಶಕ್ತಿಯುತವಾಗಿ ಮಾಡುವಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದರು. ಪಕ್ಷದ ತತ್ವ ಸಿದ್ದಾಂತದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಪಕ್ಷವನ್ನು ಬಲಪಡಿಸೋಣ ಎಂದರು. ಮುಂದಿನ ಅವಧಿಗೆ ವಲಯ ಹಾಗೂ ಬೂತ್ ಸಮಿತಿಯನ್ನು ಪುನರ್ ರಚಿಸಲಾಯಿತು. ನೂತನ ಪಂಚಾಯತ್ ಸಮಿತಿ ಅಧ್ಯಕ್ಷರಾಗಿ ದಯಾನಂದ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಬೂತ್ ಸಮಿತಿ ಅಧ್ಯಕ್ಷರಾಗಿ ಉದಯ ಕುಮಾರ್ ಶೆಟ್ಟಿ, ಸಂಜೀವ ಶೆಟ್ಟಿ, ಬಾಲಕೃಷ್ಣ ಪೂಜಾರಿ ಹಾಗೂ ಯುವ ಕಾಂಗ್ರೆಸ್ ಅದ್ಯಕ್ಷರಾಗಿ ಪುರುಷೋತ್ತಮ ವಿ.ಬಂಗೇರಾ. ಮಹಿಳಾ ಅದ್ಯಕ್ಷರಾಗಿ  ಕುಸುಮ ಇವರನ್ನು ಅಯ್ಕೆ ಮಾಡಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ್ ಜೈನ್, ಅಕ್ರಮ ಸಕ್ರಮ ಸಮಿತಿಯ ಮಾಜಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಾಲೂಕು ಪಂಚಾಯತ್ ಸದಸ್ಯೆ ಸ್ವಪ್ನ ವಿಶ್ವನಾಥ್, ಪಂಚಾಯತ್ ಸದಸ್ಯರಾದ ವಿನ್ಸೆಂಟ್ ಪಿಂಟೊ, ಶಶಿಕಲಾ, ಗೀತಾ, ವೀಕ್ಷಕರಾದ ಸುವರ್ಣ ಕುಮಾರ್ ಜೈನ್, ಮುಖಂಡರಾದ ವರದರಾಜ್ ಅನೆe, ಉಗ್ಗಪ್ಪ ಶೆಟ್ಟಿ, ಬಾಲ ಕೃಷ್ಣ, ಲೋಕೇಶ್ ಪೂಜಾರಿ, ಚಂದ್ರಹಾಸ, ಶ್ರೇಯಸ್ ಜೈನ್, ಮಹಮ್ಮದ್ ಆಸಿಪ್ ಉಪಸ್ಥಿತರಿದ್ದರು. ವಿಶ್ವನಾಥ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ದಯಾನಂದ ಶೆಟ್ಟಿ ಸ್ವಾಗತಿಸಿದರು ರಿಚಾಡ್ ಡಿ’ಸೋಜ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!