ಉಡುಪಿ: ದಂಡ ವಸೂಲಿಗೆ ಅಡ್ಡಿ ಪಡಿಸಿದಾತನ ಮೇಲೆ ಕೇಸು ದಾಖಲು

ಉಡುಪಿ : ನಿನ್ನೆ ಸಂಜೆ ಪಿಪಿಸಿ ಕಾಲೇಜ್ ಬಳಿ ವಾಹನ ತಪಾಸಣೆ ನಡೆಸುತ್ತಿರುವ ಸಂಚಾರಿ ಪೊಲೀಸ್ ಇಲಾಖಾ ಸಮವಸ್ತ್ರ ಧರಿಸದ ಕಾರಣ ಅವರನ್ನು ತಡೆದು ಕರ್ತವ್ಯಕ್ಕೆ ಅಡ್ಡಿ ಪಡಿಸರುವ ಘಟನೆಗೆ ಸಂಬಂಧಿಸಿ ಬೈಕ್ ಚಾಲಕ ಹಾಗೂ ನಂತರ ಬಂದ ಆತನ ಸಂಬಂಧಿಕನ ವಿರುದ್ದ ನಗರ ಠಾಣೆಯಲ್ಲಿ ದೂರು ದಾಖಾಲಾಗಿದೆ.
ಘಟನೆ ವಿವರ:
ಉಡುಪಿ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಉಪ-ನಿರೀಕ್ಷಕರಾದ ನಾರಾಯಣ ಗಾಣಿಗ ನಿನ್ನೆ ಉಡುಪಿಯ ಮೀನು ಮಾರ್ಕೇಟ್ ಬಳಿ ಇಲಾಖಾ ಜೀಪಿನಲ್ಲಿ ಸಿಬ್ಬಂದಿಯವರಾದ ರಾಜೀವ ಹಾಗೂ ಸಿದ್ದಣ್ಣ ಗಂಗನಳ್ಳಿರವರೊಂದಿಗೆ ಸಮವಸ್ತ್ರದಲ್ಲಿ ವಾಹನ ತಪಾಸಣೆ ನಡೆಸಿ, ಮೋಟಾರು ವಾಹನ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ, ದಂಡ ಕಟ್ಟುವವರಿಂದ ದಂಡವನ್ನು ಸಂಗ್ರಹಿಸುತ್ತಿದ್ದು, ಆ ಸಮಯ 11 ಪ್ರಕರಣವನ್ನು ದಾಖಲಿಸಿರುತ್ತಾರೆ.

ಸಾಯಂಕಾಲ 5.20 ಕ್ಕೆ ಓರ್ವ ಮೋಟಾರು ಸೈಕಲ್ ಸವಾರನು ಚಲಾಯಿಸಿಕೊಂಡು ಬರುತ್ತಿದ್ದು, ಸವಾರನು ಹೆಲ್ಮೆಟ್ ಧರಿಸದ ಕಾರಣ ವಾಹನವನ್ನು ತಪಾಸಣೆ ನಡೆಸುವ ಸಲುವಾಗಿ ನಿಲ್ಲಿಸಲು ಸೂಚನೆ ನೀಡಿದ ಮೇರೆಗೆ ವಾಹನವನ್ನು ನಿಲ್ಲಿಸಿ ಯಾರಿಗೋ ತನ್ನ ಮೊಬೈಲ್‌ನಲ್ಲಿ ಕರೆ ಮಾಡಿ ಮಾತನಾಡಿದ್ದು, ಅದಾದ ಸ್ಪಲ್ಪ ಸಮಯದಲ್ಲಿಯೇ ಓರ್ವ ವ್ಯಕ್ತಿ ಸ್ಥಳಕ್ಕೆ ಬಂದು ಪೊಲೀಸ್ ಉಪನಿರೀಕ್ಷಕರ ಇಲಾಖಾ ಜೀಪಿನ ಎದುರು ಅಡ್ಡ ಬಂದು ಜೀಪನ್ನು ನಿಲ್ಲಿಸಿ ನೀವು, ಇಲ್ಲಿ ಯಾಕೆ ಕೇಸು ಹಾಕುವುದು, ಕೆಳಗೆ ಇಳಿಯಿರಿ ಎಂದು ಹೇಳುತ್ತಾ ಪೊಲೀಸ್ ಉಪನಿರೀಕ್ಷಕರು ಕುಳಿತಿದ್ದ ಸೀಟಿನ ಬಳಿ ಬಂದು, ಜೀಪಿನ ಬಾಗಿಲನ್ನು ಹಿಡಿದು ತನ್ನ ಕೈಯ್ಯನ್ನು ಜೀಪಿನ ಒಳಗೆ ಹಾಕಿ ಪೊಲೀಸ್ ಉಪನಿರೀಕ್ಷಕರಿಗೆ ತಾಗಿಸಿ ಇಲ್ಲಿ ಯಾಕೆ ಕೇಸು ಹಾಕುವುದು, ಕೆಳಗೆ ಇಳಿಯಿರಿ ಎಂದು ಜೋರಾಗಿ ಕೂಗಾಡಲು ಪ್ರಾರಂಭಿಸಿದನು.

ಆಗ ಸ್ಥಳದಲ್ಲಿ ಜನರು ಸೇರುತ್ತಿದ್ದುದನ್ನು ಗಮನಿಸಿ ಪೊಲೀಸ್ ಉಪನಿರೀಕ್ಷಕರು ಠಾಣೆಗೆ ಮಾಹಿತಿ ನೀಡಿದ ಮೇರೆಗೆ, ಠಾಣಾ ಪ್ರಭಾರ ಕರ್ತವ್ಯದಲ್ಲಿದ್ದ ಶ್ರೀ ಸುಕುಮಾರ್ ಶೆಟ್ಟಿ ಹಾಗೂ ಸಿಬ್ಬಂದಿ ಕೊರತೆ ಇದ್ದ ಕಾರಣ ಹಿಂದಿನ ದಿನ ರಾತ್ರಿ ಕರ್ತವ್ಯವನ್ನು ನಿರ್ವಹಿಸಿ, ಘಟನೆ ದಿನವೂ ಸಹ ರಾತ್ರಿ ಕರ್ತವ್ಯಕ್ಕೆ ನಿಯೋಜನೆಗೊಂಡ ಸಾದಾ ಉಡುಪಿನಲ್ಲಿದ್ದ ಸಿಬ್ಬಂದಿ ಮಲ್ಲೇಶರವರು ಸಹಾಯಕ್ಕಾಗಿ ಸ್ಥಳಕ್ಕೆ ಬಂದಿರುತ್ತಾರೆ. ಆಗ ಮಲ್ಲೇಶರವರು ಆ ವ್ಯಕ್ತಿಗೆ ಸಮಾಧಾನ ಮಾಡುತ್ತಿದ್ದಾಗ ಆ ವ್ಯಕ್ತಿ ಮಲ್ಲೇಶರವರನ್ನು ಉದ್ಧೇಶಿಸಿ ನೀವು ಯಾರು? ನನಗೆ ಹೇಳುವುದು ಎಂದು ಏರುಧ್ವನಿಯಲ್ಲಿ ಜೋರು ಮಾಡಿರುತ್ತಾನೆ. ನಂತರ ಸ್ಥಳದಲ್ಲಿ ಹೆಚ್ಚಿನ ಜನರು ಸೇರುವುದನ್ನು ಕಂಡ ಆ ವ್ಯಕ್ತಿ ಸದ್ರಿ ಮೋಟಾರು ಸೈಕಲ್‌ನಲ್ಲಿ ಕುಳಿತುಕೊಂಡು, ಮೊದಲು ಸವಾರಿ ಮಾಡಿದ ವ್ಯಕ್ತಿಯನ್ನು ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಅಲ್ಲಿಂದ ಹೊರಟು ಹೋಗಿರುತ್ತಾನೆ.

ಪೊಲೀಸ್ ಉಪನಿರೀಕ್ಷಕರು ಸಮವಸ್ತ್ರದಲ್ಲಿ ಇತರ ಸಿಬ್ಬಂದಿಯವರೊಂದಿಗೆ ಕರ್ತವ್ಯ ನಿರ್ವಹಿಸುತ್ತಾ, ಸರ್ಕಾರವು ಹೊರಡಿಸಿದ ಸುತ್ತೋಲೆಯ ಆದೇಶದಂತೆ, ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಪೊಲೀಸ್ ಕರ್ತವ್ಯದಲ್ಲಿ ಯಾವುದೇ ಲೋಪ ಎಸಗಿರುವುದಿಲ್ಲ ಎಂದು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟನೆ ಹೊರಡಿಸಿದೆ

Leave a Reply

Your email address will not be published. Required fields are marked *

error: Content is protected !!