ರಥಬೀದಿ: ಪೊಲೀಸ್ ಎಂದು ನಂಬಿಸಿ ವೃದ್ದರೊರ್ವರ ದೋಚಿದ ಕಳ್ಳರು

.
ಉಡುಪಿ:ಹಾಡುಹಗಲೇ ಪೊಲೀಸ್ ಎಂದು ನಂಬಿಸಿ ವೃದ್ದರೊಬ್ಬರ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಇಂದು ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ನಡೆದಿದೆ.
ಇಂದು ಬೆಳಿಗ್ಗೆ 8.50 ಸುಮಾರಿಗೆ ಬ್ರಹ್ಮಾವರ ಬೈಕಾಡಿಯ ವಿಠಲ ಶೆಟ್ಟಿ (72) ಕೃಷ್ಣಮಠದ ಬಳಿ ರಾಘವೇಂದ್ರ ಮಠದ ಎದುರು ನಡೆದುಕೊಂಡು ಹೋಗುವಾಗ ಕಪ್ಪು ಬಣ್ಣದ ಮೋಟಾರು ಸೈಕಲ್‌ನಲ್ಲಿ ಇಬ್ಬರು ಬಂದು ಕನ್ನಡ ಬಾಷೆಯಲ್ಲಿ ನಾವು ಪೊಲೀಸ್ ನವರು, ಎದರು ಗಲಾಟೆಯಾಗುತ್ತಿದೆ ನಿಮ್ಮ ಚಿನ್ನದ ಉಂಗುರ ಮತ್ತು ಚೈನನ್ನು ಕೊಡಿ ನಾವು ಟವೆಲ್‌ನಲ್ಲಿ ಕಟ್ಟಿ ಕೊಡುತ್ತೇವೆ ಎಂದು ಹೇಳಿ ವೃದ್ಧ ವಿಠಲ ಶೆಟ್ಟಿಯವರಿಲ್ಲಿದ್ದ ಒಂದು ಚಿನ್ನದ ಸರ 2 ಉಂಗುರವನ್ನು ಪಡೆದಿದ್ದರು.


ಮೋಟಾರು ಸೈಕಲ್ ಸವಾರರು ಅದನ್ನು ಟವಲಿನಲ್ಲಿ ಕಟ್ಟಿ ಕೊಟ್ಟಾಗೆ ಮಾಡಿದ್ದರು. ನಂತರ ನೋಡುವಾಗ ಚಿನ್ನಾಭರಣ ಇರದೆ ಇರುವುದನ್ನು ಗಮನಿದ ವೃದ್ದ ನಗರ ಠಾಣೆಗೆ ದೂರು ನೀಡಿದ್ದಾರೆ. ಚಿನ್ನದ ಒಟ್ಟು ಮೌಲ್ಯ ರೂಪಾಯಿ1,25,000/- ಆಗಿದೆ. ಉಡುಪಿ ನಗರ ಪೊಲೀಸ್‌ಠಾಣೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!