ಲಾಡೆನ್ ಮಗನ ಸಾವು ಖಚಿತ ಪಡಿಸಿದ ಅಮೇರಿಕಾ

ವಾಷಿಂಗ್ಟನ್: ಅಲ್‌ ಖೈದಾ ಸಂಘಟನೆಯ ಉತ್ತರಧಿಕಾರಿಯೆಂದೇ ಬಿಂಬಿತವಾಗಿ ಭೀತಿ ಹುಟ್ಟಿಸಿದ್ದ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಸಾವನ್ನಪ್ಪಿದ್ದಾನೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಖಾತ್ರಿ ಪಡಿಸಿದ್ದಾರೆ.

ಒಸಾಮಾನ ಪುತ್ರ ಹಮ್ಜಾ ಬಿನ್ ಲಾಡೆನ್ ಅಮೆರಿಕ ಸೇನೆ ನಡೆಸಿದ ಯುದ್ಧ ಕಾರ್ಯಾಚರಣೆಯಲ್ಲಿ ಕೊನೆಯಾಗಿರುವುದಾಗಿ ಇಂದು ಶ್ವೇತಭವನದಿಂದ ಬಿಡುಗಡೆ ಮಾಡಲಾಗಿರುವ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ .
ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ನಡೆದ ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿರುವುದಾಗಿ ಮಾಧ್ಯಮ ಪ್ರಕಟಣೆಯಲ್ಲಿ ಹೇಳಲಾಗಿದೆ.
ಹಜ್ಮಾ ಬಿನ್ ಲಾಡೆನ್ ಸಾವಿನ ಬಗ್ಗೆ ಆಗಸ್ಟ್‌ 1 ರಂದೇ ವರದಿಗಳು ಪ್ರಕಟವಾಗಿದ್ದವು, ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಈ ವರದಿಗಳನ್ನು ಪ್ರಕಟಿಸಲಾಗಿತ್ತು. ಆದರೆ ಆತನ ಸಾವನ್ನು ಈಗ ಅಮೆರಿಕ ಸರ್ಕಾರ ಖಾತ್ರಿಪಡಿಸಿದೆ

ಸಾವಿನ ಸುದ್ದಿಯನ್ನು ಆಗಸ್ಟ್ ನಲ್ಲಿಯೇ ಪ್ರಸಾರ ಮಾಡಿದ ಅಮೇರಿಕಾದ ಮಾಧ್ಯಮ – ಈತನ ಸಾವಿನ ಬಗ್ಗೆ ಆಗಸ್ಟ್ ನಲ್ಲಿಯೇ ಅಮೇರಿಕಾದ ಮಾದ್ಯಮಗಳು ಪ್ರಸಾರ ಮಾಡಿದವು, ಆದರೆ ಸರಕಾರದಿಂದ ಯಾವುದೇ ರೀತಿಯಲ್ಲಿ ಖಾತ್ರಿಯಾಗಿರಲಿಲ್ಲ ಆದರೆ ಈಗ ಶ್ವೇತಾ ಭವನ ದಿಂದ ಹೊರಡಿಸಿದ ಪ್ರಕಟಣೆಯಲ್ಲಿ ಆತನ ಸಾವಿನ ಬಗ್ಗೆ ಸರಕಾರವು ಖಾತ್ರಿ ನೀಡಿದೆ ಆದರೆ ಸಾವಿನ ದಿನವನ್ನ ಮಾತ್ರ ತಿಳಿಸಿಲ್ಲ
ಲಾಡೆನ್ ನ 15 ನೇ ಮಗ ಹಜ್ಮಾ
ಲಾಡೆನ್ ನ 20 ಮಕ್ಕಳ ಪೈಕಿಯಲ್ಲಿ 15 ನೆಯ ಮಗನಾದ ಹಜ್ಮಾ ಬಿನ್ ಲಾಡೆನ್. ಒಸಾಮಾ ನ ಮೂರನೇ ಪತ್ನಿಯ ಮಗ , ಲಾಡೆನ್ ನ ಅಂತ್ಯವಾದ ನಂತರ ಅಲ್‌ ಖೈದಾದ ಉಗ್ರ ಸಂಘಟನೆಯ ಉತ್ತರ ಅಧಿಕಾರಿಯಾಗಿದ್ದ ಈತ ಇತ್ತೀಚಿಗಷ್ಟೇ ಭಯೋತ್ಪದಕರ ಕಪ್ಪು ಪಟ್ಟಿಗೆ ಸೇರಿದ್ದ ಅಷ್ಟೇ ಅಲ್ಲದೆ ಅಮೆರಿಕಾದ ಮೇಲೆ ಯುದ್ಧ ದ ಕರೆಯನ್ನು ನೀಡಿದ್ದ ಎನ್ನಲಾಗುತ್ತಿದೆ,.

Leave a Reply

Your email address will not be published. Required fields are marked *

error: Content is protected !!